ಬುಧವಾರ, ಜನವರಿ 29, 2020
26 °C

ಯೇಸು ಮೂರ್ತಿ ಭಗ್ನ, ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ತಾಲ್ಲೂಕಿನ ಕಮಲಾಪುರದ ಸಂತ ಅಂಥೋನಿ ಚರ್ಚ್‌ ಆವರಣದಲ್ಲಿ ನಿರ್ಮಿಸಿದ್ದ ಗೋದಲಿಯೊಳಗಿನ ಯೇಸು ಕ್ರಿಸ್ತನ ಮೂರ್ತಿ ಭಗ್ನಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ವಿನೋದ್‌ ಎಂಬಾತನ ವಿರುದ್ಧ ಗುರುವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಥೋನಿ ಎಂಬುವರು ಕೊಟ್ಟಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬುಧವಾರ ಸಂಜೆ ಯೇಸು ಮೂರ್ತಿಯ ಕತ್ತು, ಕೈಗಳನ್ನು ಮುರಿದು ಭಗ್ನಗೊಳಿಸಲಾಗಿತ್ತು.

‘ಕಮಲಾಪುರದ ನಿವಾಸಿ ಅಬ್ರಾಹಂ ಎಂಬುವರಿಂದ ದುಡ್ಡು ವಸೂಲಿ ಮಾಡಲು ಅವರ ಮನೆಗೆ ವಿನೋದ್‌ ಬುಧವಾರ ಹೋಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಸಿಟ್ಟಿನಿಂದ ವಿನೋದ್‌ ತನ್ನ ಕೈಯಲ್ಲಿದ್ದ ಯೇಸುವಿನ ಮೂರ್ತಿಯನ್ನು ಭಗ್ನಗೊಳಿಸಿದ್ದ. ಚರ್ಚ್‌ನಲ್ಲಿದ್ದ ‌ಯೇಸುವಿನ ಮೂರ್ತಿ ಕೂಡ ಇದೇ ರೀತಿ ಭಗ್ನಗೊಂಡಿತ್ತು. ಅದನ್ನು ಗಮನಿಸಿದ ಅಂಥೋನಿ, ಅದರಲ್ಲಿ ವಿನೋದ್‌ ಕೈವಾಡ ಇದೆ ಎಂದು ದೂರು ಕೊಟ್ಟಿದ್ದಾರೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಪ್ರತಿಕ್ರಿಯಿಸಿ (+)