ಯೋಗಾಸನ: ಪ್ರವೃತ್ತಿಯೇ ವೃತ್ತಿಯಾಯಿತು!

7

ಯೋಗಾಸನ: ಪ್ರವೃತ್ತಿಯೇ ವೃತ್ತಿಯಾಯಿತು!

Published:
Updated:
ಶ್ರೀನಿವಾಸ್‌ ಅವರಿಂದ ತರಬೇತಿ

ಸಂಡೂರು: ‘ಪ್ರೌಢ ಶಾಲೆಯಲ್ಲಿರುವಾಗ ಯೋಗಾಸನದ ಪುಸ್ತಕಗಳನ್ನು ಓದುತ್ತಾ, ದೂರದರ್ಶನದಲ್ಲಿ ಆ ಕುರಿತ ಕಾರ್ಯಕ್ರಮಗಳನ್ನು ನೋಡುತ್ತಾ ಹೆಚ್ಚಾದ ಆಸಕ್ತಿ ನಂತರದಲ್ಲಿ ಅದೇ ನನ್ನ ಬದುಕಿನ ವೃತ್ತಿಯಾಯಿತು...’

ಸಂಡೂರಿನ ಯೋಗ ಶಿಕ್ಷಕ, 30ರ ಹರೆಯದ ಶ್ರೀನಿವಾಸ್ ತುಮಟಿ ತಮ್ಮ ವೃತ್ತಿ–ಪ್ರವೃತ್ತಿ ಮೇಲೆ ಹೀಗೆ ಬೆಳಕು ಚೆಲ್ಲಿದರು.

ಚಿಕ್ಕ ವಯಸ್ಸಿನಲ್ಲಿಯೇ ಯೋಗ ಗುರುಗಳಿಂದ, ಹಲವು ಯೋಗ ಸಂಸ್ಥೆಗಳಿಂದ ಉತ್ತಮ ತರಬೇತಿ ಪಡೆದು ಇಂದು ಸಂಡೂರು ಸುತ್ತಮುತ್ತ ಹಲವು ಶಾಲಾ ಕಾಲೇಜುಗಳಲ್ಲಿ, ಶಿಬಿರಗಳಲ್ಲಿ ಹಿರಿ ಕಿರಿಯರಿಗೆ ತರಬೇತಿ ನೀಡುತ್ತಿದ್ದಾರೆ.

ಕೆಲ ವರ್ಷಗಳಿಂದ ಪಟ್ಟಣದ ಗುರುಭವನದಲ್ಲಿ ಪ್ರತಿದಿನ ಬೆಳಿಗ್ಗೆ 5.30 ರಿಂದ 7 ಗಂಟೆ ಹಾಗೂ ಸಂಜೆ 5.45 ರಿಂದ 7.15 ರವರೆಗೆ ಯೋಗ ತರಗತಿಯನ್ನು ನಡೆಸುತ್ತಿದ್ದಾರೆ. ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಯೋಗ ಶಿಕ್ಷಕ.

‘ಯೋಗದ ಓನಾಮವನ್ನು ಕಲಿತದ್ದು ಕೂಡ್ಲಿಗಿಯ ಶಶೀಧರ ಗುರೂಜಿಯವರಿಂದ. ನಂತರ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಪತಂಜಲಿ ಯೋಗ ತರಬೇತಿ ಶಿಬಿರ, ಕೊಟ್ಟೂರಿನ ಮಂಜುನಾಥ ಗುರೂಜಿಯವರು ನಡೆಸಿಕೊಟ್ಟ ಯೋಗ ತರಬೇತಿ ಶಿಬಿರ, ಧರ್ಮಸ್ಥಳದಲ್ಲಿ ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡೆ, ರಾಮಚಂದ್ರ ಗೂರೂಜಿಯವರ ಕುಂಡಲಿನ ಕ್ರಿಯೆಯ ಧ್ಯಾನ ಶಿಬಿರವೂ ಹೆಚ್ಚಿನ ಅನುಭವ ನೀಡಿತು’ ಎಂದರು.

‘ಯೋಗ ಉತ್ತಮ ಆರೋಗ್ಯಕ್ಕೆ ಸಹಕಾರಿ. ಮಕ್ಕಳು ಓದುತ್ತಿಲ್ಲ ಎಂದು ಗೊಣಗುವ ಪಾಲಕರು ಯೋಗ ಶಿಕ್ಷಣ ದೊರಕಿಸಿದರೆ ಹೆಚ್ಚು ಪ್ರಯೋಜನವಾಗುತ್ತದೆ’ ಎನ್ನುವ ಅವರು, ಯೋಗ ಕೇಂದ್ರವನ್ನು ತೆರೆಯುವ ಆಶಯ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !