ಇವರು ಎಲೆ ಮರೆಯ ಹಣ್ಣು!

7
ಸದ್ದಿಲ್ಲದ ಯೋಗ ಸಾಧಕ ಶಂಕ್ರಯ್ಯ ಹಿರೇಮಠ

ಇವರು ಎಲೆ ಮರೆಯ ಹಣ್ಣು!

Published:
Updated:
ಅರ್ಧ ಮತ್ಸ್ಯೇಂದ್ರಾಸನದಲ್ಲಿ ಶಂಕ್ರಯ್ಯ

ಸಿರುಗುಪ್ಪ:  ‘ಎಲೆ ಮರೆ ಕಾಯಿ’ ಎಂಬುದು ಲೋಕರೂಢಿಯ ಮಾತು. ಆದರೆ ನಗರದ ಎಸ್‌.ಜಿ.ಹಿರೇಮಠ ‘ಎಲೆ ಮರೆಯ ಹಣ್ಣು’!  72ರ ಇಳಿ ವಯಸ್ಸಿನಲ್ಲೂ ಕಷ್ಟಕರವಾದ ಯೋಗಾಸನಗಳ ಅಭ್ಯಾಸ ಮಾಡುತ್ತಿರುವ ಅವರು, ಕೇಳಿ ಬಂದವರಿಗೆ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಿಗಿ ತಾಲ್ಲೂಕಿನ ಹಂಚಿನಹಾಳು ಗ್ರಾಮದವರಾದ ಅವರು ಕೂಡಲಸಂಗಮದಲ್ಲಿ ಪ್ರೌಢಶಿಕ್ಷಣ ಪಡೆದು ನಂತರ ಅಲಹಾಬಾದಿನಲ್ಲಿ ನಾಲ್ಕು ವರ್ಷದ ಆಯುರ್ವೇದ ರತ್ನ ಪದವಿ ಶಿಕ್ಷಣ ಪಡೆದರು. ಕಾಶಿ ಹಿಂದೂ ವಿಶ್ವವಿದ್ಯಾಲಯ, ಬಿಹಾರ ಯೋಗ ವಿದ್ಯಾಲಯ, ಲಖನೌದ ಕುಂಡಲಣಿ ಯೋಗ ಸಂಶೋಧನಾ ಸಂಸ್ಥೆ, ನವದೆಹಲಿಯ ವಿಶ್ವಾಯಾತನ ಯೋಗಾಶ್ರಮ, ಲೋಣವಳದ ಜಿ.ಎಸ್‌ಕಾಲೇಜ್‌ ಆಫ್‌ ಯೋಗ, ಗೋರಖಪುರದ ಪ್ರಾಕೃತಿಕ ಚಿಕಿತ್ಸೆ ಆರೋಗ್ಯ ಮಂದಿರದಲ್ಲಿ ಅವರು ಯೋಗ, ಆಯುರ್ವೇದ ಶಿಕ್ಷಣ ಪಡೆದಿದ್ದಾರೆ.

ಸಂಚಾರಿ ಗುರು:  ಆಯುರ್ವೇದ ಮತ್ತು ಯೋಗ ಶಿಕ್ಷಣದ ಬಗ್ಗೆ ರಾಜ್ಯದ ಹೊರಗೂ ಅವರ ಪಾಠ ನಡೆದಿದೆ. ಮಹರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ದೆಹಲಿಯಲ್ಲಿ ಅವರು ಯೋಗ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ.

ರಾಜ್ಯದ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಹಲವು ತಂಡಗಳಿಗೂ ಯೋಗದ ಪಾಠಗಳನ್ನು ಹೇಳಿಕೊಟ್ಟ ಹೆಗ್ಗಳಿಕೆ ಅವರದ್ದು.  ಯೋಗದ ಪ್ರಚಾರಕ್ಕಾಗಿ ನಿರಂತರ ಸಂಚಾರ ನಡೆಸಿರುವ ಅವರನ್ನು ಸಂಘ–ಸಂಸ್ಥೆಗಳು ಇದುವರೆಗೂ ಗುರುತಿಸಿಲ್ಲ. ಅದನ್ನು ಲೆಕ್ಕಕ್ಕಡಿದ ಅವರು, ಯೋಗದ ಕುರಿತು ಜನ ಸಮುದಾಯದಲ್ಲಿ ಜಾಗೃತಿ ಹೆಚ್ಚಾಗಬೇಕು ಎನ್ನುತ್ತಾರೆ.

ಪತ್ನಿ ಮತ್ತು ಪುತ್ರ ಬಾಗಲಕೋಟೆಯಲ್ಲೇ ವಾಸವಿದ್ದು, ಶಂಕರಯ್ಯ ಮಾತ್ರ ಸಿರುಗುಪ್ಪದಲ್ಲೇ ಉಳಿದು, ಯೋಗ ಸಾಧನಾ ಆಶ್ರಮದಲ್ಲಿ ಒಂಟಿಯಾಗಿ ಯೋಗ ಜೀವನ ನಡೆಸುತ್ತಿದ್ದಾರೆ. ಚಿಕಿತ್ಸೆಯ ಸೇವೆಯನ್ನೂ ನೀಡುತ್ತಿದ್ದಾರೆ.
ಎಂ.ಬಸವರಾಜಯ್ಯ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !