ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಸ್ಸಿನ ಸಮತೋಲನ ಕಾಪಾಡಲು ಯೋಗ ಸಹಕಾರಿ’

Last Updated 3 ಸೆಪ್ಟೆಂಬರ್ 2022, 16:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಯೋಗ ಸಹಕಾರಿ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಹೇಳಿದರು.

ರಂಜು ಆರ್ಟ್ಸ್‌ ಯೋಗ ಟ್ರಸ್ಟ್ ಹಂಪಿ, ಹಠಯೋಗ ಫೆಡರೇಶನ್ ಹಾಗೂ ಇಂಟರ್ ನ್ಯಾಷನಲ್ ಯೋಗ ಸ್ಪೋರ್ಟ್ಸ್‌ ಫೆಡರೇಷನ್ ಸ್ವಿಟ್ಜರ್‌ಲೆಂಡ್‌ ಮತ್ತು ಯೋಗ ಸ್ಪೋರ್ಟ್ಸ್‌ ಅಸೋಸಿಯೇಶನ್ ಆಫ್ ಸೌತ್ ಏಷಿಯಾ ಸಹಯೋಗದಲ್ಲಿ
ತಾಲ್ಲೂಕಿನ ಹಂಪಿ ಕನ್ನಡ ವಿ.ವಿ.ಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಯೋಗಾಸನ ಚಾಂಪಿಯನ್‌ಶಿಪ್‌ ಶುಕ್ರವಾರ ಆರಂಭಗೊಂಡಿತು. ಅದರಲ್ಲಿ ಭಾಗವಹಿಸಿ ಮಾತನಾಡಿದ ಅವರು,ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುದೊಡ್ಡ ಸಮಸ್ಯೆಯಾಗಿದೆ. ನಿತ್ಯದ ಬದುಕಿನಲ್ಲಿ ಯೋಗದ ಮೂಲಕ ಆರೋಗ್ಯವಾಗಿರಬಹುದು ಎಂದರು.

ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಫೆಡರೇಶನ್ ಅಧ್ಯಕ್ಷೆ ದಿವ್ಯಕುಮಾರಿ ಡಾನ್, ರಂಜು ಆರ್ಟ್ಸ್‌ ಯೋಗ ಟ್ರಸ್ಟ್‌ ಗೌರವ ಅಧ್ಯಕ್ಷ ಮೋಹನ್ ಚಿಕ್ ಭಟ್ ಜೋಶಿ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಂಪಮ್ಮ, ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಮಂಜುನಾಥ್ ಗೌಡ, ಯೋಗ ಅಧ್ಯಯನ ವಿಭಾಗದ ನಿರ್ದೇಶಕ ಎಫ್.ಟಿ. ಹಳ್ಳಿಕೇರಿ, ಯುವ ಮುಖಂಡ ಸಿದ್ದಾರ್ಥ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT