ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಆರಂಭ

5

ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಆರಂಭ

Published:
Updated:
Deccan Herald

ಹೊಸಪೇಟೆ: ಉತ್ತರ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಎರಡು ದಿನಗಳ ಕ್ರೀಡಾಕೂಟ ಇಲ್ಲಿನ ಅರವಿಂದ ನಗರದ ನೇತಾಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಆರಂಭಗೊಂಡಿತು.

12 ಶಾಲೆಗಳ 450 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕಬಡ್ಡಿ, ಕೋ ಕೋ, ವಾಲಿಬಾಲ್‌, ಥ್ರೋಬಾಲ್‌, ಓಟದ ಸ್ಪರ್ಧೆ, ರಿಲೇ, ಶಾಟ್‌ಪುಟ್‌, ತಟ್ಟೆ ಎಸೆತ ಕ್ರೀಡೆಗಳು ನಡೆದವು. ಮಂಗಳವಾರ ಕೂಡ ಮುಂದುವರಿಯಲಿವೆ.

ಇದಕ್ಕೂ ಮುನ್ನ ಕ್ರೀಡಾಕೂಟ ಉದ್ಘಾಟಿಸಿದ ಬಾಲಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಾಲರಂಗಯ್ಯ, ‘ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ, ದೈಹಿಕ ಬೆಳವಣಿಗೆಗೆ ಅನುಕೂಲ. ಜತೆಗೆ ಹೊಸ ಚೈತನ್ಯ ಬರುತ್ತದೆ. ಓದಿನಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ. ಯಾರಿಗೆ ಯಾವ ಆಟದಲ್ಲಿ ಆಸಕ್ತಿ ಇರುತ್ತದೆಯೋ ಅದರಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ಮುಖ್ಯ ಶಿಕ್ಷಕ ಸಣ್ಣ ವೀರಣ್ಣ, ಉತ್ತರ ವಲಯ ಮಟ್ಟದ ಕಾರ್ಯದರ್ಶಿ ಬಿ.ಎಸ್.ಬಸವರಾಜ, ಹಿರಿಯ ದೈಹಿಕ ಶಿಕ್ಷಕ ರಾಮಣ್ಣ, ಮುಖ್ಯ ಶಿಕ್ಷಕಿ ಶೋಭಾವತಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !