ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರಂದು ಯಡಿಯೂರಪ್ಪ ಮನೆಗೆ ನುಗ್ಗುತ್ತೇವೆ: ಬೇಳೂರು ಗೋಪಾಲಕೃಷ್ಣ

Last Updated 24 ನವೆಂಬರ್ 2018, 12:19 IST
ಅಕ್ಷರ ಗಾತ್ರ

ಶಿವಮೊಗ್ಗ:ಬಿ.ಎಸ್.ಯಡಿಯೂರಪ್ಪ ಅವರುಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಭೂಸಂರಕ್ಷಣಾಕಾಯ್ದೆಗಳು ಇಂದು ರೈತರ ಪಾಲಿಗೆಮರಣ ಶಾಸನಗಳಾಗಿವೆ. ಅದೇ ಯಡಿಯೂಪ್ಪ ಈಗ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದರು.

ಅವರು ಜಾರಿಗೆ ತಂದ ಭೂಸಂರಕ್ಷಣಾ ಕಾಯ್ದೆಯ ಪರಿಣಾಮ ಮಲೆನಾಡಿನ ಸಣ್ಣ, ಅತಿಸಣ್ಣರೈತರು ಜೈಲಿಗೆ ಹೋಗುವಂತಾಗಿದೆ.ಇಂತಹ ಹಿನ್ನೆಲೆ ಇರುವ ಬಿಜೆಪಿಗೆಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ.ಅವರ ದ್ವಂದ್ವ ನೀತಿಖಂಡಿಸಿ ನ. 30ರಂದು ಯಡಿಯೂರಪ್ಪಅವರ ಮನೆಗೆ ನುಗ್ಗುತ್ತಿದ್ದೇವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾವಿನ ಮನೆಯಲ್ಲೂರಾಜಕೀಯ:ಸಾವಿನ ಮನೆಯಲ್ಲೂ ರಾಜಕೀಯ ಮಾಡುವುದರಲ್ಲಿ ಬಿಜೆಪಿ ಮುಖಂಡರುನಿಸ್ಸೀಮರು. ರಿಪ್ಪನಪೇಟೆ ಸಮೀಪದ ಅರಸಾಳು ಗ್ರಾಮದ ರೈತರೊಬ್ಬರು ಮನೆಯಲ್ಲಿಮೃತಪಟ್ಟಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಈ ರೈತ ಪ್ರತಿಭಟನೆವೇಳೆ ಸಾವು ಕಂಡಿದ್ದಾರೆ ಎಂದು ರಾಜಕೀಯ ಬೇಳೆ ಬೇಯಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಶೀಘ್ರ ಕಾಂಗ್ರೆಸ್‌ಗೆ:ಬಿಜೆಪಿಯ ಶಾಸಕರೊಬ್ಬರು ತಮಗೆ ಕರೆ ಮಾಡಿಪಕ್ಷದ ವಿರುದ್ಧಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಸೇರುವ ಒಲವು ತೋರಿದ್ದಾರೆ. ಅವರನ್ನು ಸಂಸತ್ ಚುನಾವಣೆವೇಳೆಗೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು ಎಂದರು.

ಬಿಜೆಪಿ ನಾಯಕ–ನಾಯಕಿಗೆಸಂಬಂಧಇಲ್ಲವೇ?:ಸ್ನೇಹಿತನ ಹೆಂಡತಿ ಪ್ರಕರಣದಲ್ಲಿ ತಾವು ತಪ್ಪಿತಸ್ಥನಲ್ಲ ಎಂದು ಪ್ರಮಾಣ ಮಾಡುವುದಾಗಿಹಾಲಪ್ಪಹರತಾಳುಹೇಳಿದ್ದಾರೆ.ಹಾಗೆಯೇಅವರ ಪಕ್ಷದಪ್ರಮುಖ ನಾಯಕಹಾಗೂ ನಾಯಕಿಮಧ್ಯೆ ಯಾವುದೇಸಂಬಂಧವಿಲ್ಲಎಂದೂಸಿಗಂಧೂರಿನಲ್ಲಿ ಪ್ರಮಾಣ ಮಾಡಬೇಕು ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT