ಕತ್ತೆ ಸಾಕುವವರಿಗೆ ಸವಲತ್ತು ನೀಡಲು ಒತ್ತಾಯ

7

ಕತ್ತೆ ಸಾಕುವವರಿಗೆ ಸವಲತ್ತು ನೀಡಲು ಒತ್ತಾಯ

Published:
Updated:
Deccan Herald

ಮಾಗಡಿ: ಅಳಿವಿನ ಅಂಚಿನಲ್ಲಿ ಇರುವ ಶ್ರಮಜೀವಿ ಕತ್ತೆ ಹಾಗೂ ಅದನ್ನು ಸಾಕುವವರಿಗೆ ಸರ್ಕಾರಿ ಸವಲತ್ತು ನೀಡಬೇಕು ಎಂದು ಮಡಿವಾಳ ಮಾಚಿದೇವ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶ್ರೀನಿವಾಸ್‌ ಒತ್ತಾಯಿಸಿದರು.

ಗುರುವಾರ ನಡೆದ ಕತ್ತೆ ಸಾಕುವವರ ಸಮಸ್ಯೆಗಳು ಒಂದು ಚರ್ಚೆ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ಹಸು ,ಕುರಿ, ಕೋಳಿ, ಹಂದಿ ಸಾಕಲು ಸಹಾಯಧನ ನೀಡುತ್ತಿದೆ. ಕತ್ತೆ ಸಾಕುವವರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದರು.

ಮಡಿವಾಳರ ಬದುಕು ಸಹ ಸಂಕಟದಲ್ಲಿದೆ. ಕೆರೆ ಗೋಕಟ್ಟೆ ಮುಚ್ಚಲಾಗುತ್ತಿದೆ. ಬಟ್ಟೆ ತೊಳೆದು ಜೀವನ ಸಾಗಿಸುತ್ತಿದ್ದ ಸಮುದಾಯದ ಬದುಕು ಬೀದಿಗೆ ಬೀಳುವಂತೆ ಆಗಿದೆ ಎಂದರು.

ಮಡಿವಾಳ ಸಂಘದ ಮುಖಂಡರಾದ ಎಂ.ಟಿ.ಶಿವಣ್ಣ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಕತ್ತೆ ಹಾಲು ಕುಡಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಲಿದೆ ಎಂಬ ವೈಜ್ಞಾನಿಕ ಚಿಂತನೆ ಇದೆ. ಮಡಿವಾಳ ಸಮುದಾಯದತ್ತ ಸರ್ಕಾರ ಗಮನಹರಿಸಬೇಕಿದೆ ಎಂದರು.

ಶೋಭಾರಂಗಪ್ಪ, ಮಾರಯ್ಯ, ವಕೀಲ ನಾರಾಯಣ ಸ್ವಾಮಿ, ಬಾಲಾಜಿ, ಪೂಜಾರಿ ಗೋವಿಂದರಾಜು, ಹೊಂಬಾಳಮ್ಮನಪೇಟೆ ರಾಜು, ಶಿಕ್ಷಕ ರಮೇಶ್ ಮಡಿವಾಳರ್‌ ಕತ್ತೆ ಸಾಕುವಾದ ಎದುರಾಗುವ ಸಮಸ್ಯೆಗಳನ್ನು ಬಿಡಿಸಿಟ್ಟರು.

ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಕಲ್ಲೂರು ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !