ಮಂಗಳವಾರ, ಮಾರ್ಚ್ 21, 2023
28 °C

16ನೇ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಶ್ರೀಮತಿ ಸರ್ವಾಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 16ನೇ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಲೇಖಕಿ ಪ್ರೊ.ಎಚ್‌.ಎಸ್‌. ಶ್ರೀಮತಿ ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಪ್ರೊ.ಎಚ್‌.ಎಸ್‌. ಶ್ರೀಮತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಎಂ. ಪ್ರಕಾಶಮೂರ್ತಿ ತಿಳಿಸಿದ್ದಾರೆ.

ಸೃಜನಶೀಲ, ಸಂಶೋಧನೆ ಹಾಗೂ ಅನುವಾದ ಸಾಹಿತ್ಯಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತ
ಗೊಳಿಸಿರುವ ಶ್ರೀಮತಿ ಅವರು ಹೊಸಕೋಟೆಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

‘ಸ್ತ್ರೀವಾದ ತಾತ್ವಿಕತೆ’, ’ಸ್ತ್ರೀವಾದ ಚಿಂತನೆ ಮತ್ತು ಹೋರಾಟ’, ‘ಮಹಿಳಾ ಆರ್ಥಿಕತೆ’ ಸೇರಿ ಹತ್ತಕ್ಕೂ ಹೆಚ್ಚು ಕೃತಿಗಳನ್ನೂ ರಚಿಸಿ
ದ್ದಾರೆ. ಸಿಮೊನ್‌ ದ ಬೋವ್ ಅವರ ‘ದಿ ಸೆಕೆಂಡ್‌ ಸೆಕ್ಸ್‌, ಜೆರಾಲ್ಡಿನ್‌ ಫೋರ್ಬ್ಸ್‌ ಅವರ ‘ಆಧುನಿಕ ಭಾರತದಲ್ಲಿ ಮಹಿಳೆ’ ಸೇರಿ ಹತ್ತಕ್ಕೂ ಹೆಚ್ಚು ಅನುವಾದ ಕೃತಿಗಳು ಹಾಗೂ ‘ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ’ ಎಂಬ ಬೃಹತ್‌ ಗ್ರಂಥವನ್ನು ಸಂಪಾದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದುವರೆಗೆ ನಡೆದಿರುವ ಬೆಂಗಳೂರು ನಗರ ಜಿಲ್ಲೆಯ ಹದಿನೈದು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಬಿ.ಟಿ.ಲಲಿತಾನಾಯಕ್, ಕೆ.ಆರ್.ಸಂಧ್ಯಾರೆಡ್ಡಿ, ಲೀಲಾವತಿ ಆರ್. ಪ್ರಸಾದ್ ಸಮ್ಮೇಳನಾಧ್ಯಕ್ಷರಾಗಿ ದ್ದರು. ಎಚ್.ಎಸ್. ಶ್ರೀಮತಿ ಅವರು
ನಾಲ್ಕನೆಯವರಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು