ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹12 ಕೋಟಿ ವಂಚನೆ: ದೂರು

ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್‌
Last Updated 26 ಫೆಬ್ರುವರಿ 2020, 5:44 IST
ಅಕ್ಷರ ಗಾತ್ರ

ಬೆಂಗಳೂರು: ‘ಐಟಿಐ ಲಿಮಿಟೆಡ್ ಬೆಂಗಳೂರು’ ಕಂಪನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಗುಜರಾತ್‌ನ ‘ಮೈಂಡರೈ ಸಿಸ್ಟಮ್ಸ್’ ಕಂಪನಿಯವರು ಬ್ಯಾಂಕ್‌ನಿಂದ ₹12.07 ಕೋಟಿ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ಅನೂಪ್‌ ಕುಮಾರ್ ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ದೂರವಾಣಿ ನಗರದಲ್ಲಿರುವ ‘ಐಟಿಐ ಲಿಮಿಟೆಡ್ ಬೆಂಗಳೂರು’ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಆಗಿರುವ ಅನೂಪ್ ಕುಮಾರ್ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ನಮ್ಮ ಕಂಪನಿ ಕೆಲಸಕ್ಕಾಗಿ ‘ಎನ್‌ಎಂಎಸ್’ ಸಾಫ್ಟ್‌ವೇರ್ ಅಗತ್ಯವಿತ್ತು. ಅದನ್ನು ಖರೀದಿಸಲು‘ಮೈಂಡರೈ ಸಿಸ್ಟಮ್ಸ್’ ಕಂಪನಿಯವರನ್ನು ಸಂಪರ್ಕಿಸಿದ್ದೆವು. ನಮ್ಮ ಕಂಪನಿ ಅವರು ತಿಳಿದುಕೊಂಡಿದ್ದರು. ನಂತರ, ನಮ್ಮದೇ ಕಂಪನಿ ಹೆಸರಿನಲ್ಲಿ ಆರೋಪಿಗಳು ನಕಲಿ ದಾಖಲೆ ಹಾಗೂ ನಕಲಿ ಸೀಲ್ ಸೃಷ್ಟಿಸಿದ್ದರು’ ಎಂಬುದಾಗಿ ಅನೂಪ್‌ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

‘ಕಂಪನಿಗೆ ನಂಬಿಕೆದ್ರೋಹ ಮಾಡಿರುವ ಮೈಂಡರೈ ಸಿಸ್ಟಮ್ಸ್ ಕಂಪನಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT