ಶನಿವಾರ, ಆಗಸ್ಟ್ 24, 2019
28 °C

ಸಮವಸ್ತ್ರ ಧರಿಸದ ನೌಕರರಿಗೆ ₹ 500 ದಂಡ

Published:
Updated:

ಬೆಂಗಳೂರು: ಸಮವಸ್ತ್ರ ಧರಿಸದಿರುವ ಗ್ರೂಪ್‌ ಡಿ ನೌಕರರಿಗೆ ಹಾಜರಾತಿ ಕಡಿತ ಹಾಗೂ ದಿನಕ್ಕೆ ₹500 ದಂಡ ವಿಧಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

‘ನೌಕರರು ಸಮವಸ್ತ್ರ ಧರಿಸುವುದು ಕಡ್ಡಾಯ. ಆದರೆ, ಈ ಹಿಂದೆ ಸೂಚನೆ ನೀಡಿದರೂ ನಿಯಮ ಪಾಲಿಸುತ್ತಿಲ್ಲ ಆದ್ದರಿಂದ ಇದೀಗ ಹಾಜರಾತಿ ಕಡಿತ ಹಾಗೂ ದಂಡದ ಕ್ರಮ ಕೈಗೊಳ್ಳಲಾಗಿದೆ. ಆಯಾ‌ ವಿಭಾಗದ ಮುಖ್ಯಸ್ಥರು ಪರಿಣಾಮಕಾರಿಯಾಗಿ ನಿಯಮ ಅನುಷ್ಠಾನ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

Post Comments (+)