ಬೆಂಗಳೂರು: ಸರ್ಕಾರಿ ಕೆಲಸದ ಆಮಿಷ ವೊಡ್ಡಿ ₹ 10 ಲಕ್ಷ ಪಡೆದು ವಂಚಿಸ ಲಾಗಿದ್ದು, ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಾಗರಬಾವಿ ನಿವಾಸಿ ಪ್ರಮೀಳಾ ಎಂಬುವರು ದೂರು ನೀಡಿದ್ದಾರೆ. ಮಂಡ್ಯದ ರಾಘವೇಂದ್ರ, ಅವರ ಪತ್ನಿ ಮನು, ಹರೀಶ್ ಮತ್ತು ನವೀನ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ನೇಹಿತರೊಬ್ಬರ ಮೂಲಕ 2017ರಲ್ಲಿ ಪ್ರಮೀಳಾ ಅವರಿಗೆ ಆರೋಪಿಗಳು ಪರಿಚಯವಾಗಿದ್ದರು. ‘ರಾಜಕಾರಣಿಗಳು ಹಾಗೂ ಅಧಿಕಾರಿಗಳು ನಮಗೆ ಪರಿಚಯ. ಯಾರಿಗೆ ಬೇಕಾದರೂ ಸರ್ಕಾರಿ ಕೆಲಸ ಕೊಡಿಸುತ್ತೇವೆ. ಆದರೆ, ಹಣ ಖರ್ಚಾಗುತ್ತದೆ’ ಎಂದಿದ್ದರು. ಅದನ್ನು ನಂಬಿದ್ದ ಪ್ರಮೀಳಾ, ತಮ್ಮ ಮಕ್ಕಳಿಗೆ ಕೆಲಸ ಕೊಡಿಸುವುದಕ್ಕಾಗಿ ₹ 10 ಲಕ್ಷ ಕೊಟ್ಟಿದ್ದರು. ಅಂಕಪಟ್ಟಿ ಪರಿಶೀಲನೆ ನೆಪದಲ್ಲೂ ಆರೋಪಿಗಳು ₹ 30 ಸಾವಿರ ಪಡೆದಿದ್ದರು’ ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.