ಮಂಗಳವಾರ, ನವೆಂಬರ್ 19, 2019
27 °C

ರೆಸ್ಟೋರೆಂಟ್‌ಗೆ ₹10 ಸಾವಿರ ದಂಡ

Published:
Updated:

ಬೆಂಗಳೂರು: ಸ್ವಚ್ಛತೆ ಕಾಪಾಡದ ಕಾರಣಕ್ಕೆ ಕನ್ನಿಂಗ್ ಹ್ಯಾಮ್ ರಸ್ತೆಯ ಫಾಸ್ಟ್ ಫುಡ್ ರೆಸ್ಟೋರೆಂಟ್ ಒಂದಕ್ಕೆ ಬಿಬಿಎಂಪಿ ಆರೋಗ್ಯಾಧಿಕಾರಿಗಳ ತಂಡ ₹10 ಸಾವಿರ ದಂಡ ವಿಧಿಸಿದೆ.

‘ಆರೋಗ್ಯಾಧಿಕಾರಿಗಳು ಭೇಟಿ ನೀಡಿದಾಗ ರೆಸ್ಟೊರೆಂಟ್‌ನಲ್ಲಿ ಶುಚಿತ್ವಕ್ಕೆ ಮಹತ್ವ ನೀಡದಿರುವುದು ಹಾಗೂ ಕೊಳೆತ ಹಣ್ಣುಗಳು, ತರಕಾರಿ ಸಂಗ್ರಹಿಸಿಟ್ಟಿರುವುದು ಕಂಡುಬಂತು. ಪರವಾನಗಿ ಅವಧಿಯೂ ಮೀರಿತ್ತು. ಈ ಸಲುವಾಗಿ ದಂಡ ವಿಧಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

‘ಬೆಂಗಳೂರಿನ ಇತರ ರೆಸ್ಟೋರೆಂಟ್‌ಗಳ ಮೇಲೆ ದಾಳಿ ಮುಂದುವರಿಸಲು ಆರೋಗ್ಯ ಇಲಾಖೆಗೆ ಆದೇಶಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ನಿಷೇಧಿತ ಪ್ಲಾಸ್ಟಿಕ್‌ ಬಳಕೆ ತಡೆಯಲು ಹಾಗೂ ಶುಚಿತ್ವ ಪರಿಶೀಲಿಸಲು ನಗರದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಿಢೀರ್‌ ದಾಳಿ ಸಂಘಟಿಸುತ್ತಿದ್ದೇವೆ. ಈ ವೇಳೆ ಅನೇಕ ರೆಸ್ಟೋರೆಂಟ್‌ಗಳು ಉದ್ದಿಮೆ ಪರವಾನಗಿ ನವೀಕರಿಸದೇ ಇರುವುದು ತಿಳಿದು ಬಂದಿದೆ. ಮಾಲೀಕರು ನಿಷೇಧಿತ ಪ್ಲಾಸ್ಟಿಕ್‌ ಬಳಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ.ವಿಜಯೇಂದ್ರ ತಿಳಿಸಿದರು.

ಪ್ರತಿಕ್ರಿಯಿಸಿ (+)