ಬೆಂಗಳೂರು: ಬಿಎಂಟಿಸಿಯ ಯಶವಂತಪುರ ಘಟಕದಲ್ಲಿ 100 ಸಿಬ್ಬಂದಿಗೆ ಮೊದಲ ಕಂತಿನ ರೂಪದಲ್ಲಿ 11 ತಿಂಗಳ ಹಿಂಬಾಕಿ ಬದಲು ಎಲ್ಲ 26 ತಿಂಗಳ ಹಿಂಬಾಕಿ ಪಾವತಿಯಾಗಿದೆ. ಜಮೆ ಆಗಿರುವ ಹೆಚ್ಚುವರಿ ಹಣವನ್ನು ಬಿಎಂಟಿಸಿ ವಾಪಸ್ ಪಡೆಯುತ್ತಿದೆ.

ಶನಿವಾರ ಹಿಂಬಾಕಿ ಮೊತ್ತ ಪಾವತಿ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ, ಬಿಲ್ಲಿಂಗ್ ಕ್ಲರ್ಕ್ ಅವರಿಂದ ಉಂಟಾದ ಅನಪೇಕ್ಷಿತ ಡೇಟಾ ಎಂಟ್ರಿ ದೋಷದಿಂದ ಸುಮಾರು 100 ನಿರ್ವಾಹಕರ ಖಾತೆಗಳಿಗೆ 26 ತಿಂಗಳ ಪೂರ್ಣ ಹಿಂಬಾಕಿ ಮೊತ್ತ ಜಮೆಯಾಗಿದೆ. ಚಾಲಕರು, ಚಾಲಕ ಕಂ ನಿರ್ವಾಹಕರು, ಮೆಕ್ಯಾನಿಕ್ಗಳು ಹಾಗೂ ಆಡಳಿತ ಸಿಬ್ಬಂದಿಗೆ ನಿಯಮಾನುಸಾರ 11 ತಿಂಗಳ ಮೊದಲ ಕಂತಿನ ಮೊತ್ತವೇ ಜಮೆಯಾಗಿದೆ. ಈ ವ್ಯತ್ಯಾಸ ಗಮನಕ್ಕೆ ಬಂದ ತಕ್ಷಣ, ಘಟಕ ವ್ಯವಸ್ಥಾಪಕರು ಕೇಂದ್ರ ಕಚೇರಿಗೆ ಮಾಹಿತಿ ನೀಡಿ ತುರ್ತು ಕ್ರಮ ಕೈಗೊಂಡಿದ್ದಾರೆ. ಸಂಬಂಧಿತ ನಿರ್ವಾಹಕರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ಪಾರದರ್ಶಕವಾಗಿ ವಿವರಿಸಲಾಗಿದ್ದು, ಹೆಚ್ಚುವರಿಯಾಗಿ ಜಮೆಯಾಗಿರುವ ಮೊತ್ತವನ್ನು ಹಿಂತಿರುಗಿಸಲು ಸಹಕಾರ ಕೋರಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಮೊತ್ತ ಮರುಪಾವತಿ ಪ್ರಕ್ರಿಯೆಯನ್ನು ಇಲಾಖೆಗೆ ಸಂಬಂಧಿಸಿದ ಚೌಡೇಶ್ವರಿ ದೇವಸ್ಥಾನ ಬಸ್ ನಿಲ್ದಾಣ ಕಚೇರಿಯ ಕ್ಯೂಆರ್ ಸ್ಕ್ಯಾನರ್/ಖಾತೆಯ ಮೂಲಕ ಸ್ವೀಕರಿಸಲಾಗುತ್ತಿದೆ. ಮರುಪಾವತಿಸಿದ ಸಿಬ್ಬಂದಿಗೆ ಅಧಿಕೃತ ರಶೀದಿ ನೀಡಲಾಗುತ್ತಿದೆ. ಸಂಪೂರ್ಣ ಪ್ರಕ್ರಿಯೆ ಇಲಾಖೆಯ ಅಧಿಕೃತ ಮೇಲ್ವಿಚಾರಣೆಯಲ್ಲೇ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದ ಸಿಬ್ಬಂದಿ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.