ಭಾನುವಾರ, ಜನವರಿ 26, 2020
28 °C

ಮಗನ ಮೇಲೆ ಹಲ್ಲೆ: ತಂದೆಯಿಂದ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 10ನೇ ತರಗತಿಯಲ್ಲಿ ಕಲಿಯುತ್ತಿರುವ ಮಗನ ಮೇಲೆ ಆರು ಮಂದಿಯ ತಂಡ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ತಂದೆ ದೂರು ನೀಡಿದ್ದಾರೆ. ಮಗನ ಹೇಳಿಕೆಯನ್ನು ದೂರಿನಲ್ಲಿ ತಂದೆ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?: ‘ಇದೇ 14ರಂದು ಮನೆಗೆ ಬಂದ ಪೊಲೀಸರು, ‘ನಿಮ್ಮ ಮಗನಿಗೆ ಯಾರೊ ಹೊಡೆದು ಕುರುಬರಹಳ್ಳಿಯಲ್ಲಿರುವ ಲೋಟಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗನ ತಲೆ ಮತ್ತು ತೊಡೆಯ ಭಾಗಕ್ಕೆ ಬ್ಯಾಂಡೇಜ್‌ ಹಾಕಲಾಗಿತ್ತು. ಈ ಬಗ್ಗೆ ಮಗನನ್ನು ವಿಚಾರಿಸಿದಾಗ, ಶಾಲೆಯಿಂದ ಮರಳುತ್ತಿದ್ದಾಗ ಮೂರು ಬೈಕುಗಳಲ್ಲಿ ಬಂದ ಆರು ಹುಡುಗರು ಹಲ್ಲೆ ನಡೆಸಿರುವುದಾಗಿ ಹೇಳಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆ ಬರೆದು ಸಹಪಾಠಿಗಳಿಬ್ಬರ ಜೊತೆ 11.30ರ ಸುಮಾರಿಗೆ ಮನೆಗೆ ಮರಳುತ್ತಿದ್ದೆ. ಹೆಲ್ಮೆಟ್‌ ಧರಿಸಿ ಬೈಕಿನಲ್ಲಿ ಬಂದಿದ್ದ ಆರು ಜನ ಹುಡುಗರು ಹಲ್ಲೆ ಮಾಡಿರುವುದಾಗಿ ದೂರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು