ಬೆಂಗಳೂರು: ದ್ವಿಚಕ್ರ ವಾಹನ ಮತ್ತು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದು, 11 ಲಕ್ಷ ಮೌಲ್ಯದ 130 ಗ್ರಾಂ ಆಭರಣ ಮತ್ತು ಮೂರು ಬೈಕ್ ವಶಕ್ಕೆ ಪಡೆದಿದ್ದಾರೆ.

ಜರಗನಹಳ್ಳಿಯ ದೀಪಕ್ ಅಲಿಯಾಸ್ ದೀಪಕ್ (23), ಬನ್ನೇರುಘಟ್ಟ ಮುಖ್ಯರಸ್ತೆಯ ಶಾನುಭೋಗನಹಳ್ಳಿಯ ಜೈದೀಪು ಅಲಿಯಾಸ್ ಜಂಗ್ಲಿ(24) ಹಾಗೂ ವಾಜರಹಳ್ಳಿಯ ಅದ್ವೈತ್ ಗೌಡ (23) ಬಂಧಿತರು.

ಸೆಪ್ಟೆಂಬರ್ನಲ್ಲಿ ಮಂಗನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ಖಾಲಿದ್ ನಯಾಜ್ ಖಾನ್ ಎಂಬವರ ಮನೆಯ ಬೀಗ ಮುರಿದ ದುಷ್ಕರ್ಮಿಗಳು ನಗದು, ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

‘ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಜೈಲು ಸೇರಿದ್ದ ಬಳಿಕ ಜಾಮೀನು ಪಡೆದು ಹೊರಗೆ ಬಂದು ಮತ್ತೆ ಕೃತ್ಯ ನಡೆಸಿದ್ದರು. ಇವರ ಬಂಧನದಿಂದ ಬ್ಯಾಡರಹಳ್ಳಿ, ಸುಬ್ರಮಣ್ಯಪುರ, ಕುಂಬಳಗೋಡು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು, ಹನುಮಂತನಗರ ಎರಡು ಹಾಗೂ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಸೇರಿ ಒಟ್ಟು 7 ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.