ಶನಿವಾರ, ಡಿಸೆಂಬರ್ 14, 2019
24 °C
ನಾಮಫಲಕದಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ

13.5 ಸಾವಿರ ವಾಣಿಜ್ಯ ಸಂಸ್ಥೆಗಳಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದ 13,575 ವಾಣಿಜ್ಯ ಸಂಸ್ಥೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿಮಾಡಿದೆ.

ಅಂಗಡಿ ಮಳಿಗೆಗಳೂ ಸೇರಿದಂತೆ ಎಲ್ಲ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇರುವುದು ಕಡ್ಡಾಯ ಎಂದು ಬಿಬಿಎಂಪಿ ಸೂಚಿಸಿದೆ. ಈ ನಿಯಮ ಎಷ್ಟು ಪಾಲನೆ ಆಗಿದೆ ಎಂಬುದನ್ನು ತಿಳಿಯಲು ಪಾಲಿಕೆಯ ಅಧಿಕಾರಿಗಳು ದಿಢೀರ್‌ ತಪಾಸಣೆ ನಡೆಸಿದ್ದರು.

ಪಾಲಿಕೆಯಿಂದ ಪರವಾನಗಿ ಪಡೆದ 47,406 ಸಂಸ್ಥೆಗಳ ಪೈಕಿ 20,689 ಸಂಸ್ಥೆಗಳ ನಾಮಫಲಕಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದರು. ಇವುಗಳಲ್ಲಿ 7,734 ಸಂಸ್ಥೆಗಳು ಮಾತ್ರ ನಿಯಮ ಪಾಲಿಸಿದ್ದು ಕಂಡುಬಂದಿತ್ತು.

‘ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದವರಿಗೆ ನೋಟಿಸ್‌ ಜಾರಿ ಮಾಡಿದ್ದೇವೆ. ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ, ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)