ಪ್ರಧಾನ ವ್ಯವಸ್ಥಾಪಕ ಪಿ. ಮಂಜುನಾಥ್ ಮಾತನಾಡಿ, ‘ಬ್ಯಾಂಕ್‌ನ ಬಂಡವಾಳ ₹95 ಕೋಟಿ ಮೀರಿದೆ. ಆಪದ್ಧನ ಮತ್ತು ಇತರ ಸ್ವಂತ ನಿಧಿ ₹ 496 ಕೋಟಿ, ಠೇವಣಿ ₹2,096 ಕೋಟಿ, ಸಾಲ ಸೌಲಭ್ಯ ₹1,333 ಕೋಟಿ, ಬ್ಯಾಂಕಿನ ಹೂಡಿಕೆ ₹1,188 ಕೋಟಿ ಇದೆ. ₹28.5 ಕೋಟಿ ನಿವ್ವಳ ಲಾಭ ಗಳಿಸಿದೆ. ನಿವ್ವಳ ಅನುತ್ಪಾದಕ ಸಾಲ ಶೂನ್ಯ ಇದೆ’ ಎಂದು ತಿಳಿಸಿದರು.