ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹62.52 ಕೋಟಿ ಅಂದಾಜು ಮೌಲ್ಯದ ಒಟ್ಟು 14 ಎಕರೆ 10 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ತಾಲ್ಲೂಕುಗಳ ತಹಶೀಲ್ದಾರ್ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸ್ಮಶಾನ, ಸರ್ಕಾರಿ ಕೆರೆ, ಸರ್ಕಾರಿ ಜಾಗ, ಖರಾಬು ತೋಪು ಹಾಗೂ ಸರ್ಕಾರಿ ಕಟ್ಟೆ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.

ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ದೊಡ್ಡನೆಕ್ಕುಂದಿ ಗ್ರಾಮದ ಸ.ನಂ 197ರ ಸ್ಮಶಾನ, ಭೋಗನಹಳ್ಳಿ ಗ್ರಾಮದ ಸ.ನಂ 33 ರ ಸ್ಮಶಾನ, ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ತಟಗುಪ್ಪೆ ಗ್ರಾಮದ ಸ.ನಂ 79 ರ ಸರ್ಕಾರಿ ಕೆರೆ, ತಾವರೆಕೆರೆ ಹೋಬಳಿಯ ಹುಲುವೇನಹಳ್ಳಿ ಗ್ರಾಮದ ಸ.ನಂ 8/1ಬಿ ಸರ್ಕಾರಿ ಜಾಗ, ಬೇಗೂರು ಹೋಬಳಿಯ ಸಿಂಗಸಂದ್ರ ಗ್ರಾಮದ ಸ.ನಂ 100 ರ ಸರ್ಕಾರಿ ಕೆರೆ ಒತ್ತುವರಿಯನ್ನು ತೆರವುಗೊಳಿಸಲಾಯಿತು.

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಇಟ್ಟಗಲಾಪುರ ಗ್ರಾಮದ ಸ.ನಂ 38 ರ ಸರ್ಕಾರಿ ಕೆರೆ, ಕಾಕೋಳು ಗ್ರಾಮದ ಸ.ನಂ 44 ರ ಸರ್ಕಾರಿ ಕೆರೆ, ಜಾಲ ಹೋಬಳಿಯ ಬಾಗಲೂರು ಗ್ರಾಮದ ಸ.ನಂ 311ರ ಖರಾಬು ತೋಪು, ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ವಡೇರಹಳ್ಳಿ ಗ್ರಾಮದ ಸ.ನಂ 12ರ ಸರ್ಕಾರಿ ಕಟ್ಟೆ ಒತ್ತುವರಿಯನ್ನು ತೆರವುಗೊಳಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.