ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 1.90 ಮತದಾನ ಇಳಿಕೆ

Last Updated 13 ಮೇ 2018, 10:00 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ 2013ರ ರಾಜ್ಯ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ 1.90ರಷ್ಟು ಮತದಾನ ಇಳಿಕೆಯಾಗಿದೆ.

ಹಿಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ 81.49 ಮತದಾನವಾಗಿತ್ತು. ಜಿಲ್ಲಾವಾರು ಮತದಾನದಲ್ಲಿ ಜಿಲ್ಲೆಯು ಮೂರನೇ ಸ್ಥಾನದಲ್ಲಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯು ಶೇ 83.50 ಮತದಾನದೊಂದಿಗೆ ಪ್ರಥಮ ಸ್ಥಾನ ಹಾಗೂ ರಾಮನಗರ ಜಿಲ್ಲೆಯು ಶೇ 82.94 ಮತದಾನದೊಂದಿಗೆ ದ್ವಿತೀಯ ಸ್ಥಾನದಲ್ಲಿತ್ತು.

ಕೇಂದ್ರ ಚುನಾವಣಾ ಆಯೋಗವು ಈ ಬಾರಿ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಮಯ ನಿಗದಿಪಡಿಸಿತ್ತು. ಬೆಳಿಗ್ಗೆ ಕೆಲ ಮತಗಟ್ಟೆಗಳಲ್ಲಿ ಆರಂಭದಲ್ಲೇ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ಮತದಾನ ಖಾತ್ರಿ (ವಿ.ವಿ ಪ್ಯಾಟ್‌) ಉಪಕರಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹೀಗಾಗಿ ಮತದಾನ ತಡವಾಗಿ ಆರಂಭವಾಯಿತು. ಆ ಮತಗಟ್ಟೆಗಳಲ್ಲಿ ಮತದಾನದ ಅವಧಿಯನ್ನು ಸಂಜೆ ಸುಮಾರು ಒಂದೂವರೆ ತಾಸು ವಿಸ್ತರಿಸಲಾಯಿತು.

ಸಂಜೆ 6 ಗಂಟೆಯೊಳಗೆ ಮತಗಟ್ಟೆಯ ಸಾಲು ಪ್ರವೇಶಿಸಿದ್ದ ಮತದಾರರಿಗೆ ಟೋಕನ್‌ ನೀಡಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಕೆಲ ಮತಗಟ್ಟೆಗಳಲ್ಲಿ ರಾತ್ರಿ 7 ಗಂಟೆವರೆಗೂ ಮತದಾನ ನಡೆಯಿತು.

ಜಿಲ್ಲೆಯಾದ್ಯಂತ ಬೆಳಿಗ್ಗೆ 9 ಗಂಟೆವರೆಗೆ ಮತದಾನ ಮಂದ ಗತಿಯಲ್ಲಿ ಸಾಗಿತ್ತು. ಮೊದಲ ಎರಡು ತಾಸಿನಲ್ಲಿ ಸರಾಸರಿ ಶೇ 7.68 ಮತದಾನವಾಗಿತ್ತು. ನಂತರದ 2 ತಾಸಿನಲ್ಲಿ ಅಂದರೆ 11 ಗಂಟೆವರೆಗೆ ಶೇ 16.23 ಮತದಾನವಾಯಿತು. 11ರ ನಂತರ ಮತದಾನ ಚುರುಕುಗೊಂಡಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 33.44ರಷ್ಟು, 3 ಗಂಟೆ ವೇಳೆಗೆ ಶೇ 52.68, ಸಂಜೆ 5 ಗಂಟೆ ವೇಳೆಗೆ ಸರಾಸರಿ ಶೇ 71.26 ಮತದಾನವಾಯಿತು. ರಾತ್ರಿ ಮತದಾನ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗುವ ವೇಳೆಗೆ ಶೇ 79.59 ಮತದಾನವಾಯಿತು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 11,98,973 ಮಂದಿ ಮತದಾರರಿದ್ದು, 9,55,291 ಮಂದಿ ಮತ ಚಲಾಯಿಸಿದ್ದಾರೆ. 6,02,371 ಪುರುಷ ಮತದಾರರಲ್ಲಿ 4,84,424 ಮಂದಿ ಹಾಗೂ 5,96,494 ಮಹಿಳಾ ಮತದಾರರಲ್ಲಿ 4,70,850 ಮಂದಿ ಚಲಾಯಿಸಿದ್ದಾರೆ. 108 ಇತರ ಮತದಾರರ ಪೈಕಿ 17 ಮಂದಿ ಮತ ಹಾಕಿದ್ದಾರೆ.

ಹೆಚ್ಚು ಮತದಾನ: ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ 88.40 ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,82,047 ಮತದಾರರು ಮತ ಚಲಾಯಿಸಿದ್ದಾರೆ. ಈ ಪೈಕಿ 92,755 ಪುರುಷ ಮತದಾರರು ಮತ್ತು 89,292 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಕಡಿಮೆ (ಶೇ 71.22) ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,60,344 ಮತದಾರರು ಮತ ಹಾಕಿದ್ದು, ಇದರಲ್ಲಿ 80,450 ಪುರುಷ ಮತದಾರರು ಮತ್ತು 79,890 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಉಳಿದಂತೆ ಮಾಲೂರು ಕ್ಷೇತ್ರದಲ್ಲಿ ಶೇ 87.11 ಮತದಾನವಾಗಿದೆ. 1,57,736 ಮಂದಿ ಮತ ಹಾಕಿದ್ದು, ಈ ಪೈಕಿ 80,612 ಪುರುಷ ಮತ್ತು 77,124 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ ಶೇ 80.25 ಮತದಾನವಾಗಿದೆ. 1,54,958 ಮಂದಿ ಮತ ಚಲಾಯಿಸಿದ್ದು, ಈ ಪೈಕಿ 78,775 ಪುರುಷ ಮತ್ತು 76,179 ಮಹಿಳಾ ಮತದಾರರು ಮತ ಹಾಕಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಶೇ 79.96 ಮತದಾನವಾಗಿದೆ. 1,62,613 ಮಂದಿ ಮತ ಹಾಕಿದ್ದು, ಇದರಲ್ಲಿ 82,438 ಪುರುಷರು ಹಾಗೂ 80,175 ಮಹಿಳೆಯರು ಮತ ಚಲಾಯಿಸಿದ್ದಾರೆ. ಕೆಜಿಎಫ್‌ ಮೀಸಲು ಕ್ಷೇತ್ರದಲ್ಲಿ ಶೇ 72.28 ಮತದಾನವಾಗಿದೆ. 1,37,593 ಮತದಾರರು ಮತ ಚಲಾಯಿಸಿದ್ದು, ಈ ಪೈಕಿ 69,394 ಪುರುಷರು ಹಾಗೂ 68,190 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.

**
ಜಿಲ್ಲೆಯಾದ್ಯಂತ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ ಮತದಾನ ನೀರಸವಾಗಿತ್ತು. ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿತು. 2013ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ 1.90ರಷ್ಟು ಕಡಿಮೆ ಮತದಾನವಾಗಿದೆ
– ಜಿ.ಸತ್ಯವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT