ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ಒಪ್ಪಂದಕ್ಕೆ ಸಹಿ, ಇನ್ನೂ ನಾಲ್ಕು ಬಾಕಿ: ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ತೆರೆ
Last Updated 21 ನವೆಂಬರ್ 2020, 21:00 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ದಿನ ವರ್ಚ್ಯುವಲ್‌ ಆಗಿ ನಡೆದ ‘ಬೆಂಗಳೂರು ತಂತ್ರಜ್ಞಾನ ಶೃಂಗ’ಕ್ಕೆ ಶನಿವಾರ ತೆರೆಬಿದ್ದಿತು. ಈ ಅವಧಿಯಲ್ಲಿ ಜಾಗತಿಕ ಆವಿಷ್ಕಾರ ಸಹಭಾಗಿತ್ವಕ್ಕಾಗಿ ಎಂಟು ಒಪ್ಪಂದಗಳಿಗೆ ಸಹಿ ಬಿದ್ದಿದ್ದು, ನಾಲ್ಕು ಒಪ್ಪಂದಗಳು ಪ್ರಗತಿಯಲ್ಲಿವೆ.

ಸಮಾರೋಪ ಸಮಾರಂಭದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ‘ಬಹುತೇಕ ಒಪ್ಪಂದಗಳು ಏರೋಸ್ಪೇಸ್‌ ಕ್ಷೇತ್ರಕ್ಕೆ ಸಂಬಂಧಿಸಿವೆ. ನಾಲ್ಕು ಒಪ್ಪಂದಗಳಿಗೆ ಸಹಿ ಹಾಕುವುದು ಬಾಕಿ ಉಳಿದಿದೆ. ಈ ಪೈಕಿ ಏರೋಸ್ಪೇಸ್‌ ಕ್ಷೇತ್ರದಲ್ಲಿನ ಸಹಭಾಗಿತ್ವಕ್ಕಾಗಿ ಅಮೆರಿಕದ ಜತೆ ಎರಡು ಒಪ್ಪಂದ
ಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದರು.

ಈ ಸಮ್ಮೇಳನವು ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಡೆದಿರುವ ಆವಿಷ್ಕಾರಗಳನ್ನು ಜಗತ್ತಿಗೆ ಪರಿಚಯಿಸಲು ವೇದಿಕೆಯಾಯಿತು ಎಂದು ತಿಳಿಸಿದರು.

ಶೃಂಗದಲ್ಲಿ 25 ದೇಶಗಳ 731 ವಿದೇಶಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅವರಲ್ಲಿ 10 ಮಂದಿ ವಿವಿಧ ದೇಶಗಳ ಸಚಿವರು. ವಿವಿಧ ಕ್ಷೇತ್ರಗಳ 146 ನವೋದ್ಯಮಗಳು ತಮ್ಮ ಆವಿಷ್ಕಾರ, ಉತ್ಪನ್ನಗಳನ್ನು ಪ್ರದರ್ಶಿಸಿವೆ.

2021ರ ನವೆಂಬರ್‌ನಲ್ಲಿ ‘ಬಿಟಿಎಸ್‌’: 2021ನೇ ಸಾಲಿನ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ವೆಂಬರ್‌ 18ರಿಂದ 20ರವರೆಗೆ ಮೂರು ದಿನಗಳ ಕಾಲ ನಡೆಸಲಾಗುವುದು ಎಂದು ಅಶ್ವತ್ಥನಾರಾಯಣ ಪ್ರಕಟಿಸಿದರು.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಮತ್ತು ನಿರ್ದೇಶಕಿ ಮೀನಾ ನಾಗರಾಜ್‌ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರ ವಿವರ

- ವರ್ಷದ ನವೋದ್ಯಮ ಪ್ರಶಸ್ತಿ– ಫೈಬ್ರೋಹೀಲ್‌ ವೂಂಡ್‌ಕೇರ್‌ ಪ್ರೈವೇಟ್‌ ಲಿಮಿಟೆಡ್‌

- ವರ್ಷದ ಆವಿಷ್ಕಾರಿ ಪ್ರಶಸ್ತಿ– ಇರ್ಬಮ್‌ ಟೆಕ್ನಾಲಜೀಸ್‌ ಸಂಸ್ಥಾಪಕನಿವೇದಿತ್‌ ಡೇ

- ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿ– ಝೂಮುಟರ್‌ ಬಯಾಲಜಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಹ ಸಂಸ್ಥಾಪಕಿ ಕವಿತಾ ಅಯ್ಯರ್‌ ರೋಡ್ರಿಗಸ್‌

-ಅತ್ಯುತ್ತಮ ಕೋವಿಡ್‌ ಸಂಬಂಧಿ ಉತ್ಪನ್ನ– ಷಣ್ಮುಖ ಇನ್ನೋವೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಮೊಬೈಲ್‌ ಇನ್ಫೆಕ್ಷನ್‌ ಟೆಸ್ಟಿಂಗ್‌ ಅಂಡ್‌ ರಿಪೋರ್ಟಿಂಗ್‌ (ಎಂಐಟಿಆರ್‌) ಲ್ಯಾಬ್ಸ್‌

-ಅತ್ಯುತ್ತಮ ಸಾಮಾಜಿಕ ಉದ್ಯಮ ಪ್ರಶಸ್ತಿ– ಪೌರ ಕಾರ್ಮಿಕರ ಸಮಸ್ಯೆ ಕುರಿತು ಕೆಲಸ ಮಾಡುತ್ತಿರುವ ಜಲೋದ್‌ಬಸ್ತ್‌

ಸುಹಾಸ್ ಶೆಣೈ ರಾಷ್ಟ್ರೀಯ ಮಟ್ಟಕ್ಕೆ

ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜಸ್ತಾನದ ಸುರತ್‌ಗಢದ ಸ್ವಾಮಿ ವಿವೇಕಾನಂದ ಮಾದರಿ ಸರ್ಕಾರಿ ಶಾಲೆಯ ಹಿಮಾಂಶು ಮಾಕರ್‌, ಮಹಾರಾಷ್ಟ್ರದ ವಾರ್ಧಾದ ಸರಸ್ವತಿ ವಿದ್ಯಾ ಮಂದಿರದ ಸಾಕ್ಷಿ ಹಿಂದೂಜಾ, ಗುಜರಾತ್‌ನ ಭಾವನಗರದ ಶ್ರೀ ಮಹಾವೀರ ಜೈನ್‌ ಚರಿತ್ರ ಕಲ್ಯಾಣ ರತ್ನಾಶ್ರಮದ ಪರಸ್‌ ಗತಾನಿ, ಚತ್ತೀಸ್‌ಗಢದ ರಾಯಪುರದ ಸರ್ಕಾರಿ ಪ್ರೌಢಶಾಲೆಯ ತೋಮನ್‌ ಸೇನ್‌, ಮಧ್ಯಪ್ರದೇಶದ ಸರ್ಕಾರಿ ಎಕ್ಸಲೆನ್ಸ್‌ ಶಾಲೆಯ ಅಮನ್‌ ಕುಮಾರ್‌ ಅಂಜನ ಮತ್ತು ಕರ್ನಾಟಕದಿಂದ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಸುಹಾಸ್‌ ಶೆಣೈ ಯು ರಾಷ್ಟ್ರಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ರಸಪ್ರಶ್ನೆ 13ನೇ ಆವೃತ್ತಿಯ ವಿಜೇತರು

ಮಣಿಪಾಲ್‌ ಸ್ಕೂಲ್‌ ಆಫ್‌ ಲೈಫ್‌ ಸೈನ್ಸಸ್‌ನ ಭದ್ರಾ ಮುರಳೀಧರನ್‌ (ಪ್ರಥಮ), ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನ ಅಮೃತ್‌ ಭಟ್‌ (ದ್ವಿತೀಯ) ಮತ್ತು ಧಾರವಾಡದ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜಿನ ವೃಷ್ಟಿ ಮಲ್ಯ (ತೃತೀಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT