ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ – ಅಪಪ್ರಚಾರದ ಮಧ್ಯೆ ಚುನಾವಣೆ

ಜಿಲ್ಲೆಯ 8 ಕ್ಷೇತ್ರದಲ್ಲಿಯೂ ಕಾಂಗ್ರೆಸ್ಗೆ ಗೆಲುವು: ಹರೀಶಕುಮಾರ್
Last Updated 5 ಏಪ್ರಿಲ್ 2018, 10:54 IST
ಅಕ್ಷರ ಗಾತ್ರ

ಪುತ್ತೂರು: ‘ಈ ಬಾರಿಯ ವಿಧಾನಸಭಾ ಚುನಾವಣೆ ನಮ್ಮ ಪಕ್ಷದ ಅಭಿವೃದ್ಧಿ ಹಾಗೂ ಬಿಜೆಪಿ ಪಕ್ಷದ ಅಪಪ್ರಚಾರಗಳ ನಡುವೆ ನಡೆಯುವ ಚುನಾವಣೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳು ಹಾಗೂ ಸರ್ಕಾರದ ಸಾಧನೆಗಳು ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ. ಜಿಲ್ಲೆಯ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ದಾಖಲೆಯ ಅಭಿವೃದ್ಧಿ ಕೆಲಸಗಳು ನಡೆದಿವೆ. ಸಂಪರ್ಕ ರಸ್ತೆ-ಸಂಪರ್ಕ ಸೇತುವೆಗಳ ಅಭಿವೃದ್ಧಿ ಗಣನೀಯ ಪ್ರಮಾಣದಲ್ಲಿ ನಡೆದಿದೆ. ಅನೇಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಈಡೇರಿಸಿದೆ ಎಂದರು.

ಅನ್ನ ಭಾಗ್ಯದಿಂದ ಹಿಡಿದು ಅನಿಲಭಾಗ್ಯದವರೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾಲಮನ್ನ, ಹೈನುಗಾರರಿಗೆ ಲೀಟರ್‌ಗೆ ₹5 ಸಬ್ಸಿಡಿ, ಇಂದಿರಾ ಕ್ಯಾಂಟೀನ್ ಮೊದಲಾದ ಹತ್ತು ಹಲವು ಯೋಜನೆಗಳೊಂದಿಗೆ ರಾಜ್ಯವನ್ನು ಹಸಿವು ಮುಕ್ತ, ಋಣಮುಕ್ತ ರಾಜ್ಯವನ್ನಾಗಿಸುವ ಕೆಲಸ ಸಿದ್ದರಾಮಯ್ಯ ಅವರಿಂದ ನಡೆದಿದೆ ಎಂದರು.ನೋಟು ಅಮಾನ್ಯ ಮಾಡಿದ ಪರಿಣಾಮವಾಗಿ ಬಹುತೇಕ ಕಂಪನಿಗಳು ಮುಚ್ಚಿವಂತಾಗಿದ್ದು, ಇದರಿಂದಾಗಿ ಹಲವು ಮಂದಿ ಉದ್ಯೋಗವನ್ನೂ ಕಳೆದುಕೊಳ್ಳುವಂತಾಗಿದೆ. ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲದಷ್ಟು ಶೇ.28ರಷ್ಟು ಜಿಎಸ್‌ಟಿ ಜಾರಿಗೆ ತಂದು ಉದ್ಯಮಿಗಳಿಗೆ, ಕೃಷಿಕರಿಗೆ ಹಾಗೂ ಜನತೆಗೆ ತೊಂದರೆ ನೀಡಿರುವುದೇ ಕೇಂದ್ರ ಸರ್ಕಾರದ ಸಾಧನೆ. ದೇಶದ ಇತಿಹಾಸದಲ್ಲೇ ಆಗದಷ್ಟು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದು, ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿದ್ದು, ಅಡಿಕೆ, ತೆಂಗು, ಕಾಳುಮೆಣಸು ಸೇರಿದಂತೆ ಕೃಷಿ ಉತ್ಪನ್ನಗಳ ಬೆಳೆ ಇಳಿಯುವಂತೆ ಮಾಡಿದೆ ಎಂದು ಟೀಕಿಸಿದರು.ಈ ಹಿಂದೆ ಅಡಿಕೆ ಬೆಳೆಗಾರರ ಪರವಾಗಿ ಮಂಗಳೂರು ತನಕ ಪಾದೆಯಾತ್ರೆ ಮಾಡಿರುವ ಕೇಂದ್ರ ಸಚಿವ ಡಿವಿ.ಸದಾನಂದ ಗೌಡ ಮತ್ತು ಜಿಲ್ಲೆಯ ನಂಬರ್ ಒನ್ ಸಂಸದರು ಈಗ ಏನು ಮಾಡುತ್ತಿದ್ದಾರೆ. ಜಿಲ್ಲೆಗೆ ಅವರ ಕೊಡುಗೆ ಏನು ಎಂಬುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಭಿನ್ನಮತ ಇಲ್ಲದೆ ಕಾಂಗ್ರೆಸ್ ಇಲ್ಲ: ಭಿನ್ನಮತ ಇಲ್ಲದೆ ಕಾಂಗ್ರೆಸ್ ಇಲ್ಲ. ನೆಹರೂ ಕಾಲದಿಂದಲೇ ಕಾಂಗ್ರೆಸ್‌ನೊಳಗೆ ಭಿನ್ನಮತ ಇತ್ತು. ಭಿನ್ನಮತ ಇದ್ದಾಗ ಕೆಲಸ ಮತ್ತಷ್ಟು ಚುರುಕಾಗುತ್ತದೆ. ನಾವು ಸ್ವಲ್ಪ ಸೋಮಾರಿಗಳಾಗಿದ್ದು ಭಿನ್ನಾಭಿಪ್ರಾಯ ಇಲ್ಲದಿದ್ದರೆ ಕೆಲಸ ಆಗುವುದಿಲ್ಲ ಎಂದು ಹರೀಶ್‌ಕುಮಾರ್ ಹೇಳಿದರು.ಏನೇ ಇದ್ದರೂ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದ್ದು, ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಎಲ್ಲವೂ ಶಮನವಾಗುತ್ತದೆ ಎಂದು ಹೇಳಿದರು.ನಮ್ಮಲ್ಲಿ ಅಭ್ಯರ್ಥಿ ವಿಚಾರದಲ್ಲಿ ಗೊಂದಲವಿಲ್ಲ. ಆದರೆ ಬಿಜೆಪಿಗರಿಗೆ ಇನ್ನೂ ಅಭ್ಯರ್ಥಿಗಳನ್ನು ಗುರುತಿಸಲು ಆಗಿಲ್ಲ. ಪಕ್ಷದ ಚಿನ್ಹೆಗೆ ವೋಟು ಕೊಡಿ ಎಂದು ಕೇಳುವ ಪರಿಸ್ಥಿತಿಯಲ್ಲಿ ಅವರಿದ್ದಾರೆ ಎಂದು ಲೇವಡಿ ಮಾಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪ್ರಧಾನ ಕಾರ್ಯದಶರ್ಿ ಕೃಷ್ಣಪ್ರಸಾದ್ ಆಳ್ವ, ಪಕ್ಷದ ವಕ್ತಾರ ದುಗರ್ಾಪ್ರಸಾದ್ ರೈ ಕುಂಬ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ, ಪಕ್ಷದ ಪ್ರಮುಖರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮತ್ತು ಬಾತಿಷಾ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

24X7 ಶಾಸಕಿ...

ಪುತ್ತೂರಿನ 24X7 ಕಾರ್ಯಚಟುವಟಿಕೆಯ ಶಾಸಕಿ ಶಕುಂತಳಾ ಶೆಟ್ಟಿ ಅವರು ಕ್ಷೇತ್ರಕ್ಕೆ ₹1 ಸಾವಿರ ಕೋಟಿಗೂ ಅಧಿಕ ಅನುದಾನ ತರಿಸಿಕೊಂಡು ಸರ್ವತೋಮುಖ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರದ್ದು ಅಭಿವೃದ್ಧಿಯ ಮಂತ್ರವಾಗಿದ್ದು, ಅಭಿವೃದ್ಧಿ ಕೆಲಸದ ಮೂಲಕ ಜನಪ್ರಿಯತೆ ಗಳಿಸಿರುವ ಅವರು ಮುಂದಿನ ಚುನಾವಣೆಯಲ್ಲೂ ಗೆಲುವು ಸಾಧಿಸಲಿದ್ದಾರೆ ಎಂದು ಹರೀಶ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಸುಳ್ಯದಲ್ಲಿ ಡಾ.ರಘು ಅವರು ಮೂರು ಬಾರಿ ಸೋಲು ಕಂಡಿದ್ದರೂ, ಅಲ್ಲಿನ ಕಾರ್ಯಕರ್ತರಿಗೆ ಅವರನ್ನು ಗೆಲ್ಲಿಸಬೇಕೆಂಬ ಹಟವಿದೆ. ಡಾ.ರಘು ಅವರು ಸೋಲು ಅನುಭವಿಸಿದ್ದರೂ ಹಳ್ಳಿ ಹಳ್ಳಿಗೆ ಹೋಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರೇ ಮತ್ತೆ ಅಭ್ಯರ್ಥಿಯಾಗಬೇಕೆಂದು ಅಲ್ಲಿನ ಕಾರ್ಯಕರ್ತರು ಬಯಸುತ್ತಿದ್ದಾರೆ ಎಂದು ತಿಳಿಸಿದರು.

**

ಜಿಲ್ಲೆಯಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿ ಗೊಂದಲವಿಲ್ಲ. ಎಲ್ಲರೂ ಪ್ರಬಲರೇ ಆಗಿದ್ದು, ಈ ಬಾರಿ ಎಲ್ಲರೂ ಗೆಲವು ಸಾಧಿಸಲಿದ್ದಾರೆ – ಹರೀಶ್‌ಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT