ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: 27 ರೈಲುಗಳ ಸಂಚಾರ ವ್ಯತ್ಯಯ

Last Updated 10 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಕಾಶಿ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದು, ಈ ಅವಧಿಯಲ್ಲಿ 27 ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ರೈಲುಗಳಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಲಿದ್ದು, ಈ ನಿಲ್ದಾಣಕ್ಕೆ ಬರುವ ರೈಲುಗಳ ಪೈಕಿ ಕೆಲವನ್ನು ಭದ್ರತೆ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ. ಹಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ಕೆಲವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಗುರುವಾರ ರಾತ್ರಿ ಬಿಡುಗಡೆ ಮಾಡಿದೆ. ಕೆಎಸ್‌ಆರ್‌ ನಿಲ್ದಾಣದ 8ನೇ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಆಸುಪಾಸಿನ ಪ್ಲಾಟ್‌ಫಾರ್ಮ್‌ಗಳಿಗೆ ರೈಲುಗಳ ಆಗಮನ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ವಿವರ ಇಂತಿದೆ: ಕೆಎಸ್‌ಆರ್- ಚನ್ನಪಟ್ಟಣ (ರೈಲು ಸಂಖ್ಯೆ 06581) ಮತ್ತು ಚನ್ನಪಟ್ಟಣ- ಕೆಎಸ್‌ಆರ್ (06582) ರದ್ದುಗೊಳಿಸಲಾಗಿದೆ. ಇನ್ನು ಅರಸೀಕೆರೆ- ಕೆಎಸ್‌ಆರ್ (06274), ಕೋಲಾರ- ಕೆಎಸ್‌ಆರ್ (16550), ಹಿಂದೂಪುರ- ಕೆಎಸ್‌ಆರ್ (06266) ರೈಲುಗಳು ಯಶವಂತಪುರದಲ್ಲೇ ನಿಲುಗಡೆ ಆಗಲಿವೆ. ಅದೇ ರೀತಿ, ಮೈಸೂರು- ಕೆಎಸ್‌ಆರ್ (06256) ರೈಲು ನಾಯಂಡಹಳ್ಳಿಯಲ್ಲೇ ನಿಲುಗಡೆ ಆಗಲಿದೆ. ಮಾರಿಕುಪ್ಪಂ- ಕೆಎಸ್‌ಆರ್ (06264) ರೈಲು ಕಂಟೋನ್ಮೆಂಟ್‌ ನಿಲ್ದಾಣದಲ್ಲೇ ಕೊನೆ ಆಗಲಿದೆ.

ಕೆಎಸ್‌ಆರ್-ತುಮಕೂರು (06571) ಮತ್ತು ಕೆಎಸ್‌ಆರ್-ಹಾಸನ (06583) ರೈಲುಗಳು ಕೆಎಸ್‌ಆರ್‌ ಬದಲಿಗೆ ಯಶವಂತಪುರದಿಂದ ಹೊರಡಲಿವೆ. ಕೆಎಸ್‌ಆರ್- ವೈಟ್‌ಫೀಲ್ಡ್‌ (01765) ರೈಲು ಕಂಟೋನ್ಮೆಂಟ್‌ನಿಂದ ಮತ್ತು ಕೆಎಸ್‌ಆರ್- ಮೈಸೂರು (06257) ನಾಯಂಡಹಳ್ಳಿಯಿಂದ ಹೊರಡಲಿದೆ. ಕುಪ್ಪಂ- ಕೆಎಸ್‌ಆರ್ (06292) ರೈಲು ಕಂಟೋನ್ಮೆಂಟ್‌ ನಿಲ್ದಾಣಕ್ಕೆ ಕೊನೆಯಾಗಲಿದೆ.

ಮೈಸೂರು-ಬೆಳಗಾವಿ (17326) ರೈಲು ಮೈಸೂರು- ಹಾಸನ-ಅರಸೀಕೆರೆ ಮೂಲಕ ಸಾಗಲಿದೆ. ಶಿವಮೊಗ್ಗ- ಕೆಎಸ್‌ಆರ್ (12090), ಮೈಸೂರು-ಕೆಎಸ್‌ಆರ್ (16215), ಚೆನ್ನೈ-ಮೈಸೂರು (12007) ರೈಲುಗಳು ಕ್ರಮವಾಗಿ ಸುಮಾರು 60 ನಿಮಿಷ ತಡವಾಗಿ ಹೊರಡಲಿವೆ. ಕೆಎಸ್‌ಆರ್-ಮೈಸೂರು (16558) ರೈಲು 90 ನಿಮಿಷ ತಡವಾಗಿ ನಿರ್ಗಮನ ಆಗಲಿದೆ. ಅದೇ ರೀತಿ, ಕೊಚ್ಚುವೇಲಿ-ಮೈಸೂರು (16316) ಮೂರು ತಾಸು, ಮೈಸೂರು-ಬೆಳಗಾವಿ (17326) 1.40 ತಾಸು, ಸೊಲ್ಲಾಪುರ-ಮೈಸೂರು (16536) ಮತ್ತು ಬಾಗಲಕೋಟೆ-ಮೈಸೂರು (17308) ಕ್ರಮವಾಗಿ ಎರಡು ತಾಸು ತಡವಾಗಿ ಹೊರಡಲಿವೆ. ವೈಟ್‌ಫೀಲ್ಡ್‌–ಕೆಎಸ್‌ಆರ್‌(01766) ಮಾರ್ಗದುದ್ದಕ್ಕೂ ಅಲ್ಲಿ 50 ನಿಮಿಷ ನಿಲುಗಡೆ ಆಗಲಿದೆ. ಅದೇ ರೀತಿ, ಮಾರಿಕುಪ್ಪಂ-ಕೆಎಸ್‌ಆರ್ (01776) 75 ನಿಮಿಷ, ಮೈಸೂರು- ಕೆಎಸ್‌ಆರ್ (16215) ಮತ್ತು ಮೈಸೂರು- ಕೆಎಸ್‌ಆರ್ (16023) ಒಂದೂವರೆ ತಾಸು ಹಾಗೂ ಶಿವಮೊಗ್ಗ- ಕೆಎಸ್‌ಆರ್ (12090) ಒಂದು ತಾಸು ಅಲ್ಲಲ್ಲಿ ನಿಲುಡೆಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT