ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಕುಶಾಗ್ರಮತಿಯನ್ನು ಒರೆಗೆ ಹಚ್ಚಿದ ಕ್ವಿಜ್‌

Last Updated 24 ಜುಲೈ 2019, 18:54 IST
ಅಕ್ಷರ ಗಾತ್ರ

ಬೆಂಗಳೂರು: ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಆಯೋಜಿಸಿದ್ದ ಅಂತರ ಶಾಲಾ ಕ್ವಿಜ್‌ನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಕೆಎಂಎಫ್ ಮತ್ತು ಎಂಎಸ್‌ಐಎಲ್ ಸಹಯೋಗದಲ್ಲಿ ಆಯೋಜಿಸಿದ್ದ ಈ ವರ್ಷದ ಮೊದಲ ಸುತ್ತಿನ ಸ್ಪರ್ಧೆ ಬಾಲಭವನದ ಸಭಾಂಗಣದಲ್ಲಿ ಬುಧವಾರ ನಡೆಯಿತು.‌ ಸೇಂಟ್‌ ಜೋಸೆಫ್‌ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಅರುಲ್ ಮಣಿ ಕಾರ್ಯಕ್ರಮ ನಡೆಸಿಕೊಟ್ಟರು.

ಕಿರಿಯ ಮತ್ತು ಹಿರಿಯರ ವಿಭಾಗದಸ್ಪರ್ಧೆಯಲ್ಲಿ ತಲಾ ನಾಲ್ಕು ತಂಡಗಳು ಪ್ರಾಥಮಿಕ ಸುತ್ತಿನಿಂದ ಅಯ್ಕೆಯಾದವು. ತಂಡದಲ್ಲಿ ತಲಾ ಇಬ್ಬರು ವಿದ್ಯಾರ್ಥಿ
ಗಳಿದ್ದರು. ಪ್ರಮುಖ ಸುತ್ತಿನಲ್ಲಿ ಲಿಖಿತ, ಧ್ವನಿ–ದೃಶ್ಯ, ಮೌಖಿಕ ಸ್ಪರ್ಧೆಗಳು ಇದ್ದವು.

ವಿಜೇತರ ವಿವರ:ಕಿರಿಯರ ವಿಭಾಗದಲ್ಲಿ ಮ್ಯೂಸಿಯಂ ರಸ್ತೆಯ ಸೇಂಟ್ ಜೋಸೆಫ್ ಪ್ರೌಢಶಾಲೆಯ ನಿಖಿಲ್ ಮತ್ತು ಶ್ರೀಧರ್ ಪ್ರಥಮ ಸ್ಥಾನ, ಬನಶಂಕರಿ ನ್ಯಾಷನಲ್ ಪಬ್ಲಿಕ್
ಶಾಲೆಯ ನೀಲಾದ್ರಿ ಮತ್ತು ಶಿವ ದ್ವಿತೀಯ, ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಅಕ್ಷಯ್ ಮತ್ತು ಅಶುತೋಷ್ತೃತೀಯ, ಯೂರೊ ಸ್ಕೂಲ್‌ನ ರಿಯಾನ್ ಮತ್ತು ರಿಷಿಕ್ ಹಾಗೂ ಆಚಾರ್ಯ ಪಾಠಶಾಲೆಯ ನಂದನ್ ಪರಿಗಿ ಮತ್ತು ಪ್ರಣವ್ ದಿಡ್ಡಿ ಸಮಾಧಾನಕರ ಬಹುಮಾನ ಪಡೆದರು.

ಹಿರಿಯರ ವಿಭಾಗದಲ್ಲಿ ಆರ್.ಟಿ.ನಗರದ ಫ್ಲಾರೆನ್ಸ್ ಪಬ್ಲಿಕ್ ಶಾಲೆಯ ಅಭಯ್ ಎ.ಕಟ್ಟಿ ಮತ್ತು ಕೆ.ಎಸ್. ನಿತೇಶ್ ಪ್ರಥಮ, ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿಶ್ವಂಭರ ಮತ್ತು ಆರ್.ಸುಹಾಸ್ ದ್ವಿತೀಯ, ಮ್ಯೂಸಿಯಂ ರಸ್ತೆಯ ಸೇಂಟ್‌ ಜೋಸೆಫ್ ಬಾಲಕರ ಪ್ರೌಢಶಾಲೆಯ ಶ್ಲೋಕ್ ಚರಣ್ ಮತ್ತು ಅವಿಯಕ್ತ್ ರೈ ತೃತೀಯ, ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಟಿ. ಸಾಯಿ ಕಿರಣ್ ಮತ್ತು ಧ್ರುವ ಕೆ. ನಾಯಕ್ ನಾಲ್ಕನೇ ಸ್ಥಾನ, ಹುಳಿಮಾವು ಬಿಜಿಎಸ್‌ ಎನ್‌ಪಿಎಸ್‌ನ ಋತ್ವಿಕ್ ಹೆಗ್ಡೆ ಮತ್ತು ಜೆ. ಸುಶಾಂತ್ ಐದನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT