ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದಲ್ಲಿ ಮೈದುಂಬಿ ಹರಿಯುತ್ತಿದೆ ಬೆಣ್ಣೆ ಹಳ್ಳ; ಹೊಸಪೇಟೆ ಸುತ್ತ ತಂಪೆರೆದ ಮಳೆ

Last Updated 29 ಮೇ 2018, 15:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವಲಗುಂದದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಲಾರಂಭಿಸಿದೆ.

ಸಂಜೆ 4.30ರಿಂದ ಮಳೆ ಆರಂಭವಾಗಿದ್ದು, ಗುಡುಗು ಸಿಡಿಲಿನ ಆರ್ಭಟ ಜೋರಾಗಿದೆ. ಮಳೆ ನೀರಿನಿಂದ ಚರಂಡಿಗಳು ತುಂಬಿ ಹರಿಯುತ್ತಿವೆ. ಜತೆಗೆ ಜೋರಾಗಿ ಗಾಳಿ ಬೀಸುತ್ತಿದೆ. ಇದರಿಂದ ಸಂಜೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ತುಪ್ಪದ ಕುರಹಟ್ಟಿ ಗ್ರಾಮದಲ್ಲಿ ಜೋರಾಗಿ ಬಿಸಿದ ಗಾಳಿಯಿಂದಾಗಿ ಮನೆ ಮೆಲಿನ ತಗಡುಗಳು ಹಾರಿ ಹೊಗಿವೆ. ವಿದ್ಯುತ್ ತಂತಿ ಹರಿದು ಬಿದ್ದಿದೆ. ಮರಗಳು ನೆಲಕ್ಕುರಿಳಿವೆ.

ನವಲಗುಂದ ತಾಲ್ಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿ 8ಗಂಟೆವರೆಗೆ ಮಳೆ ಸುರಿದಿದ್ದು, ಬೆಣ್ಣೆ ಹಳ್ಳ ಮೈದುಂಬಿ ಹರಿಯುತ್ತಿದೆ.

ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆ‌ ಮಳೆ ಸುರಿಯಿತು.

ತಂಪೆರೆದ ಬಿರುಗಾಳಿ ಮಳೆ
ಹೊಸಪೇಟೆ:
ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆ‌ ಸುರಿದ ಬಿರುಗಾಳಿ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿತ್ತು.
ಕಳೆದ ಎರಡ್ಮೂರು ದಿನಗಳಿಂದ ಬಿಸಿಲು, ಉಬ್ಬಣಿಕೆ ಇತ್ತು. ಶಕೆಯಿಂದ ಜನ ಕಂಗಾಲಾಗಿದ್ದರು. ಮಂಗಳವಾರ ಸುರಿದ ಮಳೆ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಸಂಜೆ ಏಳು ಗಂಟೆ ಸುಮಾರಿಗೆ ಆರಂಭವಾದ ಮಳೆ‌ ಎಂಟು ಗಂಟೆಯ ವರೆಗೆ ಎಡೆಬಿಡದೆ ಸುರಿಯಿತು. ಮಳೆಯೊಂದಿಗೆ ಭಾರಿ ಬಿರುಗಾಳಿ ಇದ್ದದ್ದರಿಂದ ವಾಹನ ಸವಾರರು ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ಕಟ್ಟಡಗಳ ಅಡಿ ಆಶ್ರಯ ಪಡೆದಿದ್ದರು. ಇದೇ ವೇಳೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಕಾರಣ ಇಡೀ ನಗರ ರಾತ್ರಿ ಒಂಬತ್ತು ಗಂಟೆಯ ವರೆಗೆ ಅಂಧಕಾರದಲ್ಲಿ ಮುಳುಗಿತ್ತು.

ತಾಲ್ಲೂಕಿನ ಹಂಪಿ, ಕಮಲಾಪುರ, ಪ್ರಕಾಶ್ ನಗರ, ಕಡ್ಡಿರಾಂಪುರ, ಮಲಪನಗುಡಿ, ಚಿನ್ನಾಪುರ, ನಲ್ಲಾಪುರ, ಬೈಲುವದ್ದಿಗೇರಿ, ರಾಮಸಾಗರ, ವೆಂಕಟಾಪುರ, ಹೊಸೂರು, ಕಲ್ಲಹಳ್ಳಿ ಸೇರಿದಂತೆ‌ ಇತರೆ ಕಡೆ ವರ್ಷಧಾರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT