ದೂರವಾಣಿ ಸಂಖ್ಯೆ ಸೋರಿಕೆ: ಆರೋಪ

7
ಚುನಾವಣಾ ಆಯೋಗದ ವಿರುದ್ಧ ಆರೋಪ

ದೂರವಾಣಿ ಸಂಖ್ಯೆ ಸೋರಿಕೆ: ಆರೋಪ

Published:
Updated:

ಬೆಂಗಳೂರು: ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಪದವೀಧರ ಮತದಾರರನ್ನು ನೋಂದಣಿ ಮಾಡುವ ವೇಳೆ ನೀಡಿದ್ದ ದೂರವಾಣಿ ಸಂಖ್ಯೆಗಳು ಸೋರಿಕೆ ಆಗಿವೆ. ರಹಸ್ಯವಾಗಿಡಬೇಕಿದ್ದಸಂಖ್ಯೆಗಳು ಹೇಗೆ ಸೋರಿಕೆ ಆಗಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಪಿಐ ಕಾರ್ಯದರ್ಶಿ ಎಸ್‌.ಲಕ್ಷ್ಮಿ ಆಗ್ರಹಿಸಿದರು.

ರಾಷ್ಟ್ರೀಯ ಪಕ್ಷಗಳ ನಾಯಕರು ತಮ್ಮ ಪಕ್ಷಗಳ ಪರವಾಗಿ 65,354 ಮತದಾರರ ಮೊಬೈಲ್‌ ಸಂಖ್ಯೆಗಳಿಗೆ ಆನ್‌ಲೈನ್‌, ಎಸ್‌ಎಂಎಸ್‌ ಹಾಗೂ ಕರೆಗಳ ಮೂಲಕ ಆಮಿಷ ಒಡ್ಡುತ್ತಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ

ಒತ್ತಾಯಿಸಿದರು.

ಮತದಾರರ ದೂರವಾಣಿ ಸಂಖ್ಯೆಗಳು ತಮ್ಮ ಕಚೇರಿಯಿಂದ ಸೋರಿಕೆಯಾಗಿವೆಯೇ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯ ಚುನಾವಣಾ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ತನಿಖೆ ನಡೆಸಿಲ್ಲ ಎಂದು ಅವರು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry