ಜೋಸೆಫ್‌ ಕಾಲೇಜಿಗೆ ವಿಶ್ವವಿದ್ಯಾಲಯದ ಮಾನ್ಯತೆ

7

ಜೋಸೆಫ್‌ ಕಾಲೇಜಿಗೆ ವಿಶ್ವವಿದ್ಯಾಲಯದ ಮಾನ್ಯತೆ

Published:
Updated:

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಅಭಿಯಾನ(ರೂಸಾ)ದ ಎರಡನೇ ಹಂತದ ಯೋಜನೆ ಅಡಿಯಲ್ಲಿ ಸೇಂಟ್‌ ಜೋಸೆಫ್‌ ಕಾಲೇಜಿಗೆ ವಿಶ್ವವಿದ್ಯಾಲಯದ ಮಾನ್ಯತೆ ದೊರೆತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾ. ವಿಕ್ಟರ್‌ ಲೋಬೋ ತಿಳಿಸಿದರು.

ಸ್ವಾಯತ್ತ ಕಾಲೇಜುಗಳಿಗೆ ವಿಶ್ವವಿದ್ಯಾಲಯದ ಮಾನ್ಯತೆ ನೀಡುವ ಅವಕಾಶವಿರುವುದರಿಂದ ರೂಸಾ ಎರಡನೇ ಹಂತದ ಯೋಜನೆಯಡಿ ಮಾನ್ಯತೆ ಕೋರಿ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿ.ವಿ ಮಾನ್ಯತೆ ಪಡೆದಿರುವ ದೇಶದ 3 ಸಂಸ್ಥೆಗಳಲ್ಲಿ ಸೇಂಟ್‌ ಜೋಸೆಫ್‌ ಕಾಲೇಜು ಒಂದಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

137 ವರ್ಷಗಳ ಇತಿಹಾಸ ಹೊಂದಿರುವ ಸೇಂಟ್‌ ಜೋಸೆಫ್ ಕಾಲೇಜು ಯುಜಿಸಿಯಿಂದ ‘ಕಾಲೇಜ್‌ ಆಫ್ ಎಕ್ಸಲೆನ್ಸ್‌’ ಎಂದು ದೃಢೀಕೃತಗೊಂಡಿದೆ. ನ್ಯಾಕ್‌ ನಡೆಸಿದ್ದ 4ನೇ ಸುತ್ತಿನ 2017ರ ಮರು ಮೌಲ್ಯಮಾಪನದಲ್ಲಿ 3.79/4 ಅಂಕ ಗಳಿಸಿ ದೇಶಕ್ಕೆ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು. ಪ್ರೊ.ರೆಜಿನಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry