7

ಈ ಬಾಲಕರ ಕಾಲೇಜಿಗೆ ಇನ್ನುಮುಂದೆ ಬಾಲಕಿಯರೂ ಬರಬಹುದು

Published:
Updated:
ಈ ಬಾಲಕರ ಕಾಲೇಜಿಗೆ ಇನ್ನುಮುಂದೆ ಬಾಲಕಿಯರೂ ಬರಬಹುದು

ಬೆಂಗಳೂರು: ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಲಕಿಯರ ದಾಖಲಾತಿಗೂ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಇಷ್ಟು ವರ್ಷದವರೆಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆಗಿದ್ದ ಇದು ಇನ್ನು ಮುಂದೆ ಸರ್ಕಾರಿ ಪದವಿಪೂರ್ವ ಕಾಲೇಜು ಮಾತ್ರ ಆಗಲಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜತೆಗೆ ಪ್ರಾಥಮಿಕ, ಮಾಧ್ಯಮಿಕ ಶಾಲೆಯೂ ಇಲ್ಲಿದೆ. ಹತ್ತರವರೆಗೆ ಸಹ ಶಿಕ್ಷಣದಲ್ಲಿದ್ದ ವಿದ್ಯಾರ್ಥಿಗಳು ಪಿಯುನಲ್ಲಿ ಬೇರ್ಪಡಲು ಇಷ್ಟವಿಲ್ಲದೆ, ಕಾಲೇಜು ತೊರೆಯುತ್ತಿದ್ದಾರೆ. ಇದರಿಂದಾಗಿ ದಾಖಲಾತಿಯೂ ಕಡಿಮೆಯಾಗುತ್ತಿದೆ ಎನ್ನುವುದನ್ನು ಗಮನಿಸಿ ಶಿಕ್ಷಣ ಇಲಾಖೆ ಈ ಮಾರ್ಪಾಡು ಮಾಡಿದೆ.

ಈ ಕಾಲೇಜಿನ ಸಮೀಪವೇ ಇರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅಗತ್ಯಕ್ಕಿಂತ ಹೆಚ್ಚು ದಾಖಲಾತಿಗಳಾಗುತ್ತಿದ್ದು, ಅನೇಕರಿಗೆ ಸೀಟು ದೊರೆಯದಂತಾಗಿದೆ. ಇಲ್ಲಿ ಸಹ ಶಿಕ್ಷಣ ಪಡೆಯುವ ಅವಕಾಶವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ದಾಖಲಾತಿ ಹೊಂದುವಂತೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಎಂದು ಕಾಲೇಜಿನ ಶಿಕ್ಷಕರು ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ 50 ವಿದ್ಯಾರ್ಥಿನಿಯರು ದಾಖಲಾತಿ ಪಡೆದಿದ್ದಾರೆ.

‘ನಮ್ಮಲ್ಲಿ ಬಾಲಕರಿಗೆ ₹3,000 ಸಾವಿರ ಶುಲ್ಕವಿದೆ. ಆದರೆ, ಬಾಲಕಿಯರಿಗೆ ₹100 ಹೊರತುಪಡಿಸಿ ಯಾವುದೇ ರೀತಿಯ ದಾಖಲಾತಿ ಶುಲ್ಕ ಪಡೆಯುವುದಿಲ್ಲ. ಪರೀಕ್ಷಾ ಶುಲ್ಕಗಳು ಪ್ರತ್ಯೇಕವಾಗಿರುತ್ತವೆ’ ಎಂದು ಕಾಲೇಜಿನ ಪ್ರಾಂಶುಪಾಲ ಜಿ.ವಿ.ರಮೇಶ್‌ ಮಾಹಿತಿ ನೀಡಿದರು. ಕಲಾ ವಿಭಾಗದಲ್ಲಿ 200 ಸೀಟುಗಳು ಭರ್ತಿಯಾಗುತ್ತವೆ, ವಾಣಿಜ್ಯ ವಿಭಾಗಕ್ಕೆ ಹೆಚ್ಚು ಬೇಡಿಕೆ ಇದ್ದು 450 ಸೀಟುಗಳ ಸಾಮರ್ಥ್ಯವಿದ್ದು 500 ಮಂದಿಯ ದಾಖಲಾತಿಯಾಗಿದೆ.ವಿಜ್ಞಾನ ವಿಭಾಗದಲ್ಲಿ 200 ಸೀಟುಗಳಿದ್ದು 100 ಭರ್ತಿಯಾಗಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry