ಫೇಸ್‌ಬುಕ್ ಬಳಸಬೇಡ ಎಂದಿದ್ದಕ್ಕೆ ಮನೆ ಬಿಟ್ಟ ಬಾಲಕಿ

7

ಫೇಸ್‌ಬುಕ್ ಬಳಸಬೇಡ ಎಂದಿದ್ದಕ್ಕೆ ಮನೆ ಬಿಟ್ಟ ಬಾಲಕಿ

Published:
Updated:
ಫೇಸ್‌ಬುಕ್ ಬಳಸಬೇಡ ಎಂದಿದ್ದಕ್ಕೆ ಮನೆ ಬಿಟ್ಟ ಬಾಲಕಿ

ಬೆಂಗಳೂರು: ‘ಫೇಸ್‌ಬುಕ್ ಅತಿಯಾಗಿ ಬಳಸಬೇಡ’ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ, ಬಾಲಕಿಯೊಬ್ಬಳು ಮನೆ ಬಿಟ್ಟು ಹೋಗಿದ್ದಾಳೆ.

ಈ ಸಂಬಂಧ ಪೋಷಕರು, ಅನ್ನಪೂರ್ಣೆಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕಿಯನ್ನು ಪತ್ತೆ ಹಚ್ಚುತ್ತಿದ್ದಾರೆ.

17 ವರ್ಷದ ಬಾಲಕಿಯು ನಗರದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಳು. ಆಕೆಯ ಪೋಷಕರು, ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

ಕಾಲೇಜಿನ ಉಪನ್ಯಾಸಕರು ನೀಡುವ ಮನೆಪಾಠ ಮಾಡಲು ಬೇಕೆಂದು ಬಾಲಕಿ, ಮೊಬೈಲ್‌ ಕೊಡಿಸಿಕೊಂಡಿದ್ದಳು. ಇತ್ತೀಚೆಗೆ ಮೊಬೈಲ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಳು. ಭಾನುವಾರ ಬೆಳಿಗ್ಗೆ 6 ಗಂಟೆಗೆ ಎದ್ದಿದ್ದ ಬಾಲಕಿ, ಫೇಸ್‌ಬುಕ್‌ ನೋಡುತ್ತ ಹಾಸಿಗೆಯಲ್ಲೇ ಕುಳಿತುಕೊಂಡಿದ್ದಳು. ಅದನ್ನು ನೋಡಿ ಸಿಟ್ಟಾಗಿದ್ದ ತಾಯಿ, ‘ಹೆಚ್ಚಾಗಿ ಫೇಸ್‍ಬುಕ್ ಬಳಕೆ ಮಾಡಬೇಡ. ಓದಿನ ಕಡೆ ಲಕ್ಷ್ಯ ಕೊಡು’ ಎಂದಿದ್ದರು. ಅಷ್ಟಕ್ಕೇ ಕೋಪಗೊಂಡ ಬಾಲಕಿ, ಮಧ್ಯಾಹ್ನವೇ ಮನೆ ತೊರೆದಿದ್ದಾಳೆ.‌

ಸ್ನೇಹಿತರು ಹಾಗೂ ಸಂಬಂಧಿಕರ ಬಳಿಯಲ್ಲೆಲ್ಲ ಹುಡುಕಾಡಿದರೂ ಬಾಲಕಿ ಸಿಕ್ಕಿಲ್ಲ. ಬಳಿಕವೇ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry