ಗಮನ ಬೇರೆಡೆ ಸೆಳೆದು ಕಳವು

7

ಗಮನ ಬೇರೆಡೆ ಸೆಳೆದು ಕಳವು

Published:
Updated:

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳ ಗಮನ ಬೇರೆಡೆ ಸೆಳೆದು ₹1ಲಕ್ಷ ನಗದು ಅಪಹರಿಸಿದ ಪ್ರಕರಣ ನಗರದ ಕಿಮ್ಸ್‌ ಆಸ್ಪತ್ರೆ ಬಳಿ ನಡೆದಿದೆ.

ಈ ಬಗ್ಗೆ ಉತ್ತರಹಳ್ಳಿ ವಲ್ಲಭನಗರದ ನಿವಾಸಿ ಸತ್ಯಲಕ್ಷ್ಮಿ ವಿಶ್ವೇಶ್ವರಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ 1ರಂದು ಅನೇಕಲ್‌ನಲ್ಲಿರುವ ಮಗಳ ಮನೆಯಿಂದ ಕೆ.ಆರ್‌.ಮಾರುಕಟ್ಟೆಗೆ ಬಂದು, ಅಲ್ಲಿಂದ ಉತ್ತರಹಳ್ಳಿಗೆ ಹೋಗುವಾಗ ಹಣ ಕಳವು ಮಾಡಿದ್ದಾರೆ ಎಂದು ಸತ್ಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.

‘ಬಿಎಂಟಿಸಿ ಬಸ್‌ಗೆ ಹತ್ತಿದ ಇಬ್ಬರು ಮಹಿಳೆಯರು ಸಿಟಿಗಾಗಿ ಜಗಳವಾಡಿ, ಗಮನ ಬೇರೆಡೆ ಸೆಳೆದು ಬ್ಯಾಗಿನಲ್ಲಿದ್ದ ನಗದು ಕಳವು ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry