‘ಪ್ಲಾಸ್ಟಿಕ್‌ ಬಳಕೆ ತಗ್ಗಿಸಿ, ಮರಗಳ ನಾಟಿ ಹೆಚ್ಚಿಸಿ’

7

‘ಪ್ಲಾಸ್ಟಿಕ್‌ ಬಳಕೆ ತಗ್ಗಿಸಿ, ಮರಗಳ ನಾಟಿ ಹೆಚ್ಚಿಸಿ’

Published:
Updated:
‘ಪ್ಲಾಸ್ಟಿಕ್‌ ಬಳಕೆ ತಗ್ಗಿಸಿ, ಮರಗಳ ನಾಟಿ ಹೆಚ್ಚಿಸಿ’

ಬೆಂಗಳೂರು: ಪ್ಲಾಸ್ಟಿಕ್‌ ಬಳಕೆ ತಗ್ಗಿಸಿ, ಮರಗಳ ನಾಟಿ ಹೆಚ್ಚಿಸಿ ಎಂದು ಮರ ವಿಜ್ಞಾನಿ ವಿಜಯ್ ನಿಶಾಂತ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಮರ್ಥ ಭಾರತ ಟ್ರಸ್ಟ್‌ ಸಹಯೋಗದಲ್ಲಿ ಜಯನಗರದ ಆರ್‌.ವಿ.ಟೀಚರ್ಸ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ಒಂದು ಕೋಟಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕತೆ ಹೆಚ್ಚಾದಂತೆ ಪರಿಸರದ ಜೊತೆಗಿನ ಒಲವು ಕುಂಠಿತವಾಗುತ್ತಿದೆ. ಮಹಾನಗರಗಳಲ್ಲಿ ಅಭಿವೃದ್ಧಿಗಾಗಿ ಮರಗಳ ಹನನ ನಿರಂತರವಾಗಿ ನಡೆಯುತ್ತಿದೆ. ಪ್ರತಿನಿತ್ಯ 5 ಸಾವಿರ ಜನ ಶುದ್ಧ ನೀರು ಸಿಗದೆ ಸಾಯುತ್ತಿದ್ದಾರೆ. ಪರಿಸರ ಜಾಗೃತಿಯ ಕೊರತೆಯಿಂದಾಗಿ ಕಲುಷಿತ ವಾತಾವರಣ, ಪ್ಲಾಷ್ಟಿಕ್‌ ಬಳಕೆ ದಿನದಿಂದ ದಿನಕ್ಕೆ ಹೇರಳವಾಗುತ್ತಿದೆ. ಹಾಗಾಗಿ ಮರಗಳಿಂದ ಆವೃತವಾದ ಸ್ಮಾರ್ಟ್‌ ನಗರಗಳೊಂದಿಗೆ ಬದುಕು ಕಟ್ಟಿಕೊಳ್ಳೋಣ ಎಂದರು.

ಮಕ್ಕಳನ್ನು ಪರಿಸರದೊಂದಿಗೆ ಬೆಳೆಯಲು ಬಿಡದೆ ಯಾಂತ್ರಿಕ, ತಾಂತ್ರಿಕವಾಗಿ ಬೆಳೆಸುತ್ತಿರುವುದು ಭವಿಷ್ಯದ ಪೀಳಿಗೆಗೆ ಮಾರಕವಾಗಲಿದೆ. ತೀರಾ ನಾಜೂಕಿನ ಬದುಕು ಸಮಸ್ಯೆಗಳ ಸರಮಾಲೆಯನ್ನೆ ತಂದೊಡ್ಡಲಿದೆ. ಮಕ್ಕಳು ಕಲ್ಲು, ಮಣ್ಣು, ಪರಿಸರದೊಂದಿಗೆ ಬೆಳೆದಾಗ ಮಾತ್ರ ಸಹಜ, ಸ್ವಾಭಾವಿಕ, ನೆಮ್ಮದಿಯ ಬದುಕನ್ನು ಬಾಳಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೃಷ್ಣಯ್ಯ ಮಾತನಾಡಿ, ಸೃಷ್ಟಿಯ ಸಂವೇದನೆ, ಭಾವನೆಗಳನ್ನು ಅರಿತು, ಅದಕ್ಕೆ ಪೂರಕವಾಗಿ ಸಾವಯವ ಗೊಬ್ಬರ ಬಳಕೆ ಹೆಚ್ಚಿಸಿ, ಪರಿಸರವನ್ನು ಕಾಪಾಡಿಕೊಳ್ಳೋಣ ಎಂದು ಹೇಳಿದರು.

*

2017ರ ಜೂನ್‌ 5ರಿಂದ ಆಗಸ್ಟ್‌ 15 ರ ತನಕ ಅಭಿಯಾನದ ವತಿಯಿಂದ ಗಿಡ ನೆಟ್ಟ ಮೊದಲ ಹಂತದ ವಿವರ:

ನೆಡಲಾದ ಒಟ್ಟು ಗಿಡಗಳು– 14,09,921

ತಯಾರಿಸಲಾದ ಒಟ್ಟು ಬೀಜದುಂಡೆಗಳು–52,20,550

ಎಸೆಯಲಾದ ಬೀಜದುಂಡೆಗಳು– 44,82,830

ಸಾರ್ವಜನಿಕ ಸಹಭಾಗಿತ್ವ– 28,011

ಅಭಿಯಾನಕ್ಕೆ ಸಹಕರಿಸಿದ ಸಂಸ್ಥೆಗಳು– 368

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry