ಓಲಾ, ಉಬರ್ ಮುಕ್ತ ರಾಜ್ಯಕ್ಕೆ ಸಿ.ಎಂಗೆ ಒತ್ತಾಯ

7

ಓಲಾ, ಉಬರ್ ಮುಕ್ತ ರಾಜ್ಯಕ್ಕೆ ಸಿ.ಎಂಗೆ ಒತ್ತಾಯ

Published:
Updated:

ಬೆಂಗಳೂರು: ಸಿಟಿ ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಮೇಲಾಗುತ್ತಿರುವ ಶೋಷಣೆಯನ್ನು ತಡೆಗಟ್ಟಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಚಾಲಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಈ ಹಿಂದೆ ಚಾಲಕರು ನಿರಂತರವಾಗಿ ಪ್ರತಿಭಟನೆ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ಅಂಥ ಸ್ಥಿತಿಗೆ ತರಬೇಡಿ. ಅವರ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿಯಲ್ಲಿರುವ ಅಧಿಕಾರಿಗಳು ಶ್ರಮಿಸಿ’ ಎಂದರು.

ಮೊಬೈಲ್ ಆ್ಯಪ್‌ ಆಧರಿತ ಕ್ಯಾಬ್ ಕಂಪನಿಗಳಾದ ಓಲಾ ಹಾಗೂ ಉಬರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಚಾಲಕರು, ‘ಇಲ್ಲಿಯ ಚಾಲಕರಿಗೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು’ ಎಂದರು.

‘ದರವೂ ಅವೈಜ್ಞಾನಿಕ: ‘ವಾಹನಗಳ ಮೌಲ್ಯದ ಆಧಾರದಲ್ಲಿ ದರಗಳನ್ನು ನಿಗದಿಪಡಿಸಿ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಈ ದರಗಳು ಅವೈಜ್ಞಾನಿಕವಾಗಿವೆ’ ಎಂದು ಚಾಲಕರು ಆರೋಪಿಸಿದರು.

‘ದರ ನಿಗದಿ ವೇಳೆ ಓಲಾ ಹಾಗೂ ಉಬರ್ ಕಂಪನಿಗಳ ಪ್ರತಿನಿಧಿಗಳ ಅಭಿಪ್ರಾಯವನ್ನಷ್ಟೇ ಪಡೆಯಲಾಗಿದೆ. ಇದರಿಂದ ನಮಗೆಲ್ಲ ಅನ್ಯಾಯವಾಗಿದೆ’ ಎಂದರು.

ಸಮಸ್ಯೆ ಆಲಿಸಿದ ಕುಮಾರಸ್ವಾಮಿ, ‘ನಿಮ್ಮ ಜತೆಗೆ ನಾನಿದ್ದೇನೆ. ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಿದ್ದೇನೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry