ಇ–ಮೇಲ್ ಹ್ಯಾಕ್‌ ಮಾಡಿ ₹ 95 ಲಕ್ಷ ದೋಚಿದರು!

7
ಸುಧಾ ಕೊ–ಆಪ್‌ ಇ–ಮೇಲ್ ಹ್ಯಾಕ್

ಇ–ಮೇಲ್ ಹ್ಯಾಕ್‌ ಮಾಡಿ ₹ 95 ಲಕ್ಷ ದೋಚಿದರು!

Published:
Updated:
ಇ–ಮೇಲ್ ಹ್ಯಾಕ್‌ ಮಾಡಿ ₹ 95 ಲಕ್ಷ ದೋಚಿದರು!

ಬೆಂಗಳೂರು: ಸೈಬರ್ ವಂಚಕರು ಜಯನಗರದ ‘ಸುಧಾ ಕೊ–ಆಪರೇಟಿವ್ ಬ್ಯಾಂಕ್‌’ನ ಇ–ಮೇಲ್ ಹ್ಯಾಕ್ ಮಾಡಿ ₹ 95 ಲಕ್ಷ ದೋಚಿದ್ದಾರೆ.

ಸುಧಾ ಬ್ಯಾಂಕ್, ಜೆ.ಪಿ.ನಗರದಲ್ಲಿರುವ ಐಡಿಬಿಐ ಬ್ಯಾಂಕ್‌ ಶಾಖೆಯಲ್ಲಿ ಖಾತೆಯನ್ನು ಹೊಂದಿದೆ. ಅದರ ಇ–ಮೇಲ್ ಹ್ಯಾಕ್ ಮಾಡಿದ್ದ ವಂಚಕರು, ಹಣ ವರ್ಗಾವಣೆ ಸಂಬಂಧ ಮೇ 28ರಂದು ಐಡಿಬಿಐ ಅಧಿಕಾರಿಗಳಿಗೆ ಮೇಲ್ ಕಳುಹಿಸಿದ್ದರು. ಸುಧಾ ಬ್ಯಾಂಕ್‌ನ ಅಧಿಕೃತ ಮೇಲ್‌ನಿಂದಲೇ ಮನವಿ ಬಂದಿದ್ದರಿಂದ ಅದನ್ನು ನಂಬಿದ ಅಧಿಕಾರಿಗಳು, ಹ್ಯಾಕರ್‌ಗಳು ಕೊಟ್ಟಿದ್ದ ಎರಡು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

₹ 95 ಲಕ್ಷ ವರ್ಗಾವಣೆಯಾದ ಸಂಬಂಧ ಸುಧಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಟಿ.ಎಲ್.ಹನುಮಂತರಾಯ ಅವರ ಮೊಬೈಲ್‌ಗೆ ಸಂದೇಶ ಹೋಗಿದೆ. ಅದನ್ನು ನೋಡಿ ಗಾಬರಿಗೊಂಡ ಅವರು, ಕೂಡಲೇ ಐಡಿಬಿಐ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ.

‘ಉತ್ತರಪ್ರದೇಶದ ನೋಯಿಡಾದಲ್ಲಿರುವ ‘ಖಾನ್ ಎಂಟರ್‌ಪ್ರೈಸ್’ ಹೆಸರಿನ ಸಂಸ್ಥೆಯ ಖಾತೆಗೆ ₹50 ಲಕ್ಷ ಹಾಗೂ ಗುರುಗ್ರಾಮದಲ್ಲಿರುವ ‘ರಿಯಾ ಎಂಟರ್‌ಪ್ರೈಸಸ್’ ಹೆಸರಿನ ಸಂಸ್ಥೆ ಖಾತೆಗೆ ₹45 ಲಕ್ಷ ವರ್ಗಾವಣೆಯಾಗಿದೆ. ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ, ಆ ಖಾತೆಗಳ ವಿವರ ಪಡೆಯುತ್ತಿದ್ದೇವೆ’ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದರು.

‘ ಗ್ರಾಹಕನ ಬ್ಯಾಂಕ್‌ ವಿಳಾಸದಿಂದಲೇ ಮೇಲ್ ಬಂದಿತ್ತು. ಹೀಗಾಗಿ, ಹಣ ವರ್ಗಾಯಿಸಿದೆವು’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry