ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಸಿಕಲ್‌ ಶೇರಿಂಗ್‌: ಪ್ರಸ್ತಾವ ಆಹ್ವಾನ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ಬೈಸಿಕಲ್‌ ಬಳಕೆ ಉತ್ತೇಜಿಸಲು ನಿರ್ಧರಿಸಿರುವ ನಗರ ಭೂಸಾರಿಗೆ ನಿರ್ದೇಶನಾಲಯವು (ಡಿಯುಎಲ್‌ಟಿ), ಈ ಸೇವೆ ಒದಗಿಸಲು ಆಸಕ್ತ ಕಂಪನಿಗಳಿಂದ ಪ್ರಸ್ತಾವ ಆಹ್ವಾನಿಸಿದೆ.

ನಗರದ 70ರಿಂದ 80 ಕಿ.ಮೀ ವ್ಯಾಪ್ತಿಯಲ್ಲಿ ‘ಬೈಸಿಕಲ್ ಶೇರಿಂಗ್‌ ವ್ಯವಸ್ಥೆ’ಯನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತಿದೆ. ಸೈಕಲ್‌ ನಿಲುಗಡೆಗಾಗಿ ಎಂ.ಜಿ.ರಸ್ತೆ, ವಿಧಾನಸೌಧ, ಇಂದಿರಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಈಗಾಗಲೇ 600 ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲೆಲ್ಲ ಸೈಕಲ್‌ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ.

ಝೂಮ್ ಕಾರ್‌ ಕಂಪನಿಯು ‘ಪೆಡಲ್‌’ ಹೆಸರಿನ ಬೈಸಿಕಲ್‌ ಸೇವೆಯನ್ನು ನಗರದಲ್ಲಿ ಇತ್ತೀಚೆಗಷ್ಟೇ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT