ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ತಯಾರಿಕಾ ಸೂಚ್ಯಂಕ: ಭಾರತಕ್ಕೆ 30ನೇ ಸ್ಥಾನ

Last Updated 14 ಜನವರಿ 2018, 19:22 IST
ಅಕ್ಷರ ಗಾತ್ರ

ನವದೆಹಲಿ/ಜಿನೀವಾ: ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಪ್ರಕಟಿಸಿರುವ ಜಾಗತಿಕ ಉತ್ಪಾದನಾ ಸೂಚ್ಯಂಕದಲ್ಲಿ ಭಾರತ 30ನೇ ರ‍್ಯಾಂಕ್‌ ಗಳಿಸಿದೆ.

‘ಬ್ರಿಕ್ಸ್‌’ ರಾಷ್ಟ್ರಗಳಲ್ಲಿ ಚೀನಾ ಮಾತ್ರ ಭಾರತಕ್ಕಿಂತ ಮುಂದಿದ್ದು 5ನೇ ಗಳಿಸಿದೆ; ಉಳಿದ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್‌, ರಷ್ಯಾ ಮತ್ತು ದಕ್ಷಿಣ ಆಫ್ರಿಕಾಗಳು ಕೆಳಗಿನ ಸ್ಥಾನಗಳಲ್ಲಿವೆ. ಜಪಾನ್‌  ಮೊದಲ ರ‍್ಯಾಂಕ್‌ ಗಳಿಸಿದೆ.

ವಿಶ್ವ ಆರ್ಥಿಕ ವೇದಿಕೆಯು ‘ಭವಿಷ್ಯದ ತಯಾರಿಕಾ ಸನ್ನದ್ಧತೆ’ ಕುರಿತಾಗಿ ಪ್ರಕಟಿಸಿರುವ ಮೊದಲ ವರದಿಯಲ್ಲಿ ಈ ರ‍್ಯಾಂಕ್‌ಗಳನ್ನು ನೀಡಲಾಗಿದೆ.

ನೆರೆಯ ಶ್ರೀಲಂಕಾ (66), ಪಾಕಿಸ್ತಾನ (74) ಮತ್ತು ಬಾಂಗ್ಲಾದೇಶಗಳಿಗಿಂತ (80) ಭಾರತ ಮುಂದಿದೆ.

ನಾಲ್ಕು ವಿಭಾಗ

ಡಬ್ಲ್ಯುಇಎಫ್‌ನ ವರದಿಯು ವಿವಿಧ ರಾಷ್ಟ್ರಗಳಲ್ಲಿ ಆಧುನಿಕ ಕೈಗಾರಿಕಾ ಕಾರ್ಯವಿಧಾನಗಳ ಅಭಿವೃದ್ಧಿಯನ್ನು ವಿಶ್ಲೇಷಿಸಿದೆ. ವಿವಿಧ ದೇಶಗಳು ತಯಾರಿಕಾ ಕ್ಷೇತ್ರದಲ್ಲಿ ಭವಿಷ್ಯಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗೆ ಅನುಗುಣವಾಗಿ, 100 ರಾಷ್ಟ್ರಗಳನ್ನು ನಾಲ್ಕು ವಿಭಾಗಗಳನ್ನಾಗಿ ಅದು ಮಾಡಿದೆ.

1. ಮುಂಚೂಣಿ (ತಯಾರಿಕಾ ಕ್ಷೇತ್ರದಲ್ಲಿ ಪ್ರಸ್ತುತ ಗಟ್ಟಿ ನೆಲೆ ಹೊಂದಿರುವ ಮತ್ತು ಭವಿಷ್ಯಕ್ಕೆ ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿರುವ) ರಾಷ್ಟ್ರಗಳು

2. ಹೆಚ್ಚು ಸಾಮರ್ಥ್ಯ ಹೊಂದಿರುವ (ಪ್ರಸ್ತುತ ಸೀಮಿತ ನೆಲೆ ಮತ್ತು ಭವಿಷ್ಯದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಬಹುದಾದ) ರಾಷ್ಟ್ರಗಳು

3. ಗಟ್ಟಿ ತಳಹದಿ ಇರುವ (ಪ್ರಸ್ತುತ ಪ್ರಬಲ ಆಧಾರ ಹೊಂದಿರುವ ಮತ್ತು ಭವಿಷ್ಯದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇರುವ) ರಾಷ್ಟ್ರಗಳು

4. ಶೈಶವ (ಸದ್ಯ ಸೀಮಿತ ನೆಲೆ ಹೊಂದಿರುವ ಹಾಗೂ ಭವಿಷ್ಯಕ್ಕೆ ಹೆಚ್ಚು ಸಿದ್ಧತೆ ಮಾಡಿಕೊಂಡಿರದ) ರಾಷ್ಟ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT