ಈಶ್ವರಿ ಬ್ರಹ್ಮಕುಮಾರಿ ಆಶ್ರಮದ ಸನ್ಯಾಸಿನಿಗೆ ಪಂಗನಾಮ

7

ಈಶ್ವರಿ ಬ್ರಹ್ಮಕುಮಾರಿ ಆಶ್ರಮದ ಸನ್ಯಾಸಿನಿಗೆ ಪಂಗನಾಮ

Published:
Updated:

ಬೆಂಗಳೂರು: ಉಡುಗೊರೆ ಕೊಡುವುದಾಗಿ ಹೇಳಿ ನಂಬಿಸಿದ್ದ ವ್ಯಕ್ತಿಯೊಬ್ಬ, ಈಶ್ವರಿ ಬ್ರಹ್ಮಕುಮಾರಿ ಆಶ್ರಮದ ಸನ್ಯಾಸಿನಿಯಿಂದ ₹1.11 ಲಕ್ಷ ಪಡೆದು  ವಂಚಿಸಿದ್ದಾನೆ.

ಈ ಸಂಬಂಧ ಸನ್ಯಾಸಿನಿ ಅಮ್ಮ ತೇಜಸ್ವಿನಿ (61) ಎಂಬುವರು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಜಿ.ಎಂ.ಪಾಳ್ಯದ ಭೈರಸಂದ್ರ ಮುಖ್ಯರಸ್ತೆಯಲ್ಲಿರುವ ಅಮ್ಮ ತೇಜಸ್ವಿನಿ ಅವರ ಫೇಸ್‌ಬುಕ್‌ ಖಾತೆಗೆ ಜಾನ್‌ ಹೆನ್ರಿ ಎಂಬಾತ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಅದನ್ನು ತೇಜಸ್ವಿನಿ ಸ್ವೀಕರಿಸಿದ್ದರು. ನಂತರ, ಆರೋಪಿ ಅವರೊಂದಿಗೆ ಚಾಟ್‌ ಮಾಡಲಾರಂಭಿಸಿದ್ದ. ವಾಟ್ಸ್‌ಆಫ್‌ ನಂಬರ್ ಪಡೆದು, ಅದರ ಮೂಲಕವೂ ಚಾಟ್‌ ಮಾಡುತ್ತಿದ್ದ.

ಇತ್ತೀಚೆಗೆ ಆರೋಪಿ, ‘ನಿಮ್ಮ ಆಶ್ರಮಕ್ಕೆ ನಾನೇನಾದರೂ ಸಹಾಯ ಮಾಡಬಹುದಾ’ ಎಂದು ಕೇಳಿದ್ದ. ಅದನ್ನು ದೂರುದಾರರು ನಿರಾಕರಿಸಿದ್ದರು. ನಂತರ ಆರೋಪಿ, ‘ಉಡುಗೊರೆ ಕಳುಹಿಸುತ್ತೇನೆ. ದಯವಿಟ್ಟು ಬೇಡ ಎನ್ನಬೇಡಿ. ಅದನ್ನು ಪಡೆದುಕೊಳ್ಳಿ’ ಎಂದಿದ್ದನೆಂದು ಸೈಬರ್‌ ಕ್ರೈಂ ಪೊಲೀಸರು ಹೇಳಿದರು.

ಏಪ್ರಿಲ್ 20ರಂದು ತೇಜಸ್ವಿನಿಗೆ ಕರೆ ಮಾಡಿದ್ದ ಸೋನಾಲಿಕಾ ಎಂಬಾಕೆ, ತಾನು ದೆಹಲಿಯ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು. ‘ನಿಮಗೆ ಬೆಲೆ ಬಾಳುವ ಚಿನ್ನದ ಆಭರಣ ಹಾಗೂ ಸಾಕಷ್ಟು ಹಣ ಬಂದಿದೆ. ಅದನ್ನು ಪಡೆದುಕೊಳ್ಳಲು ಶುಲ್ಕ ಕಟ್ಟಬೇಕು’ ಎಂದಿದ್ದಳು. ಅದನ್ನು ನಂಬಿದ್ದ ತೇಜಸ್ವಿನಿ, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಖಾತೆಗೆ ₹1.11 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ ಆರೋಪಿ, ಮೊಬೈಲ್‌ ಸ್ವಿಚ್ಟ್‌ ಆಫ್‌ ಮಾಡಿದ್ದಳು. ಜಾನ್‌ ಹೆನ್ರಿ ಸಹ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕವೇ ತೇಜಸ್ವಿನಿ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ವಿವರಿಸಿದರು.

*

ದೂರುದಾರರೊಂದಿಗೆ ಚಾಟ್‌ ಮಾಡುತ್ತಿದ್ದ ಆರೋಪಿ ಜಾನ್‌ ಹೆನ್ರಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಕೊಂಡಿರುವ ಸೈಬರ್‌ ಕ್ರೈಂ ಠಾಣೆಯ ಪೊಲೀಸರು, ಅವರನ್ನು ಪತ್ತೆ ಹಚ್ಚುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry