ಅನುಕಂಪ ಇಲ್ಲ: ಸಾಮರ್ಥ್ಯವೇ ಎಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ

7

ಅನುಕಂಪ ಇಲ್ಲ: ಸಾಮರ್ಥ್ಯವೇ ಎಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ

Published:
Updated:
ಅನುಕಂಪ ಇಲ್ಲ: ಸಾಮರ್ಥ್ಯವೇ ಎಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ

ಬೆಂಗಳೂರು: ರಾಜ್ಯದ ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮದೇ ಛಾ‍ಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ವಿಜಯಕುಮಾರ್‌ ಅವರ ನಿಧನದಿಂದ ಸೃಷ್ಟಿಯಾಗಿರುವ ಅನುಕಂಪದ ಅಲೆಯನ್ನು ಮಹಿಳಾ ಶಕ್ತಿ ತೊಡೆದು ಹಾಕಲಿದೆ ಎಂಬ ವಿಶ್ವಾಸ ಅವರದ್ದು. ಈ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸುವ ಕನಸು ಕಾಣುತ್ತಿರುವ ಅವರು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ್ದಾರೆ.

* ಮಹಿಳೆಯರಿಗೆ ಟಿಕೆಟ್‌ ಕೊಡಲು ರಾಜ್ಯದ ಪ್ರಮುಖ ಪಕ್ಷಗಳು ಚೌಕಾಸಿ ಮಾಡುತ್ತವೆ ಅಲ್ಲವೇ?

ಹೌದು, ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್‌ ಸಿಗುವುದು ತುಂಬಾ ಕಷ್ಟ. ಕಾಂಗ್ರೆಸ್‌ನಲ್ಲಿ 15 ಮಂದಿಗೆ ಟಿಕೆಟ್ ಕೊಡಲಾಗಿದೆ. ಮಹಿಳೆಯರಿಗೆ ಆದ್ಯತೆ ಸಿಗುತ್ತಿರುವುದು ನಮ್ಮ ಪಕ್ಷದಲ್ಲೇ.

* ಪ್ರಭಾವಿ ರಾಜಕಾರಣಿಯ ಮಗಳು ಎಂಬ ಕಾರಣಕ್ಕೆ ನಿಮಗೆ ಅವಕಾಶ ಸಿಕ್ಕಿದೆಯೇ?

ಅದೂ ಒಂದು ಕಾರಣ ಇರಬಹುದು. ಆದರೆ, 15 ವರ್ಷಗಳಿಂದ ನಾನು ಸಮಾಜಸೇವೆ ಮಾಡಿಕೊಂಡು ಬಂದಿದ್ದೇನೆ. ಯುವ ಕಾಂಗ್ರೆಸ್‌ ಉಪಾಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ಮಹಿಳಾ ಕಾಂಗ್ರೆಸ್‌ನಲ್ಲಿ ಕಾರ್ಯದರ್ಶಿ ಆಗಿದ್ದೆ. ಓದಿದ್ದು, ಬೆಳೆದಿದ್ದೂ ಜಯನಗರದಲ್ಲಿ. ಇಲ್ಲಿನ ಪ್ರತಿ ವಾರ್ಡ್‌ನ ಪರಿಚಯ ನನಗಿದೆ.

* ಚುನಾವಣೆಯಲ್ಲಿ ನಿಮ್ಮನ್ನು ಏಕೆ ಗೆಲ್ಲಿಸಬೇಕು?

ನಾನು ವಿದ್ಯಾವಂತ ರಾಜಕಾರಣಿ. ಭ್ರಷ್ಟಾಚಾರರಹಿತ ಆಡಳಿತ ನೀಡಲು ಬದ್ಧಳಾಗಿದ್ದೇನೆ.

* ಅಭಿವೃದ್ಧಿಗೆ ನಿಮ್ಮ ಕಾರ್ಯಸೂಚಿಗಳು ಏನು?

ಸಮಾಜಸೇವೆ ನನಗೆ ಹೊಸದಲ್ಲ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಶಿಕ್ಷಣ ಮೂಲಭೂತ ಹಕ್ಕಾಗಬೇಕು. ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರಿನ ಸಮಸ್ಯೆ ನೀಗಿಸ

ಬೇಕು. ಜಯನಗರ ಹಳೆಯ ಕ್ಷೇತ್ರ. ಇಲ್ಲಿರುವ ಮರಗಳನ್ನು ಕಾಪಾಡಬೇಕು.

* ವಿಜಯಕುಮಾರ್‌ ಸಜ್ಜನ ಶಾಸಕರಾಗಿ ಗುರುತಿಸಿಕೊಂಡಿದ್ದರು. ಈಗ ಅವರ ಸಹೋದರ ನಿಮ್ಮ ಎದುರಾಳಿ. ಸ್ಪರ್ಧೆ ಕಠಿಣವೇ?

ಖಂಡಿತಾ ಅವರು ಸಜ್ಜನ ರಾಜಕಾರಣಿ. ಆದರೆ, ಕ್ಷೇತ್ರದಲ್ಲಿ ತುಂಬಾ ಪ್ರಜ್ಞಾವಂತ ಮತದಾರರಿ ದ್ದಾರೆ. ‘ನೀವು ಏನು ಕೆಲಸ ಮಾಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ. ‘ನಾನು ಇಂತಹವರ ಮಗಳು, ಮತ ಕೊಡಿ’ ಎಂದರೆ ಯಾರೂ ಹಾಕುವುದಿಲ್ಲ. ಜನ ವ್ಯಕ್ತಿಯನ್ನು ನೋಡುವುದಿಲ್ಲ, ಸಾಮರ್ಥ್ಯವನ್ನು ನೋಡುತ್ತಾರೆ.

* ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯಿಂದ ನಿಮಗೆ ಅನುಕೂಲ ಆಗುವುದೇ?

ಜೆಡಿಎಸ್‌ ನಮಗೆ ಬೆಂಬಲ ನೀಡಿದೆ. ಮತ ಹಂಚಿಹೋಗಬಾರದು ಎಂಬ ಉದ್ದೇಶ ಎರಡೂ ಪಕ್ಷಕ್ಕೆ ಇದೆ. ಇದು ನಿಜಕ್ಕೂ ಬಲ ತಂದುಕೊಟ್ಟಿದೆ.

* ಕುಕ್ಕರ್‌, ಸೀರೆ ಹಂಚುತ್ತಿದ್ದಾರೆ ಎಂದು ರವಿಕೃಷ್ಣಾರೆಡ್ಡಿ ಆರೋಪಿಸಿದ್ದಾರೆ..

ಅವರದ್ದು ಅತಿರೇಕದ ವರ್ತನೆ. ಅವರ ಫೇಸ್‌ಬುಕ್‌ ಪುಟ ತೆಗೆದು ನೋಡಿದರೆ ಅವರ ಬಂಡವಾಳ ಗೊತ್ತಾಗುತ್ತದೆ. ಚುನಾವಣಾ ಆಯೋಗವೇ ಅಕ್ರಮ ನಡೆದಿಲ್ಲ ಎಂದು ಹೇಳಿದರೂ ಅವರು ಬಿಡುತ್ತಿಲ್ಲ.

* ರಾಜಕಾರಣಿಯಾಗಿ ನಿಮ್ಮ ಕನಸುಗಳೇನು?

ಮನೆಯಲ್ಲಿ ನಾನು ಗೃಹಿಣಿ ಮಾತ್ರ. ಅಪ್ಪ, ಅಮ್ಮನ ಮುದ್ದಿನ ಮಗಳು. ಸಹೋದರ ಮತ್ತು ಪತಿ ಬೆಂಬಲವಾಗಿದ್ದಾರೆ. ಕುಟುಂಬದ ಬೆಂಬಲ ನನ್ನ ಮನೋಬಲ ಹೆಚ್ಚಿಸಿದೆ. ಮಹಿಳೆಯಾಗಿ ನಾನು ಸಮಾಜಕ್ಕೆ ಕೊಡುಗೆ ನೀಡಬೇಕಾಗಿರುವುದು ಸಾಕಷ್ಟಿದೆ. ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇನೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry