ಬಿಬಿಎಂಪಿ ಸಾಮಾನ್ಯ ಸಭೆ ನೇರಪ್ರಸಾರಕ್ಕೆ ಚಿಂತನೆ

7
ವೆಬ್‌ಸೈಟ್‌ ಅಥವಾ ಫೇಸ್‌ಬುಕ್‌ನಲ್ಲಿ ಪ್ರಸಾರ

ಬಿಬಿಎಂಪಿ ಸಾಮಾನ್ಯ ಸಭೆ ನೇರಪ್ರಸಾರಕ್ಕೆ ಚಿಂತನೆ

Published:
Updated:
ಬಿಬಿಎಂಪಿ ಸಾಮಾನ್ಯ ಸಭೆ ನೇರಪ್ರಸಾರಕ್ಕೆ ಚಿಂತನೆ

ಬೆಂಗಳೂರು: ಬಿಬಿಎಂಪಿ ಸಾಮಾನ್ಯ ಸಭೆಯ ಕಲಾಪಗಳನ್ನು ನೇರ ಪ್ರಸಾರ ಮಾಡಲು ಚಿಂತನೆ ನಡೆದಿದೆ.

ಜನಾಗ್ರಹ ಸಮೀಕ್ಷೆಯ ಆಧಾರದಲ್ಲಿ ಪ್ರಸ್ತಾವ ರೂಪಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಬಿ.ಎಂ.ವಿಜಯಶಂಕರ್‌ ತಿಳಿಸಿದರು. ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಜನರೂ ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ನೇರಪ್ರಸಾರ ಪ್ರಧಾನ ಪಾತ್ರ ವಹಿಸುತ್ತದೆ. ತಾವು ಆಯ್ಕೆ ಮಾಡಿದ ಸದಸ್ಯರು ಚರ್ಚೆಗಳಲ್ಲಿ ಯಾವ ರೀತಿ ಪಾಲ್ಗೊಳ್ಳುತ್ತಾರೆ, ಯಾರು ಯಾವ ವಿಷಯಗಳನ್ನೆತ್ತಿ ಮಾತನಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಅವರ ಕಾರ್ಯದಕ್ಷತೆ, ಪಾಲ್ಗೊಳ್ಳುವಿಕೆಯ ಆಧಾರದಲ್ಲಿ ಅವರನ್ನು ಮುಂದಿನ ಬಾರಿ ಆಯ್ಕೆ ಮಾಡಬೇಕೋ ಬೇಡವೋ ಎಂಬುದನ್ನು ಜನರು ನಿರ್ಧರಿಸಬಹುದು’ ಎಂದು ಸಂಪತ್‌ರಾಜ್‌ ವಿವರಿಸಿದರು.

‘ಜನರು ಕಾರ್ಪೊರೇಟರ್‌ಗಳ ವರ್ತನೆಯನ್ನೂ ಗಮನಿಸುತ್ತಿರುತ್ತಾರೆ. ಹೀಗಾಗಿ ಸಭೆಯಲ್ಲಿ ಅನಪೇಕ್ಷಿತ ಘಟನೆಗಳು, ಅಡ್ಡಿಗಳು ಉಂಟಾಗುವುದನ್ನು ತಡೆಯಬಹುದು. ಜನ ನೋಡುತ್ತಾರೆ ಎಂಬ ಪ್ರಜ್ಞೆ ಇರುವುದರಿಂದ ಸದಸ್ಯರು ಎಚ್ಚರಿಕೆಯಿಂದ ಇರುತ್ತಾರೆ ಎಂದು ಅವರು ಹೇಳಿದರು.

‘ಏನೇ ಆದರೂ ಮೇಯರ್‌ ಮತ್ತು ಆಯುಕ್ತರ ಸಲಹೆ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ವಿಜಯಶಂಕರ್‌ ಹೇಳಿದರು.

ವಿಧಾನಸಭೆಯ ಕಲಾಪಗಳನ್ನೂ ಪ್ರತ್ಯೇಕ ಚಾನೆಲ್‌ ಮೂಲಕ ಪ್ರಸಾರ ಮಾಡುವ ಪ್ರಸ್ತಾವವನ್ನೂ ಈ ಹಿಂದೆ ರೋಷನ್‌ಬೇಗ್‌ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾಗಿದ್ದಾಗ ಮಾಡಲಾಗಿತ್ತು. ಕ್ರಮೇಣ ಅದು ಮರೆಗೆ ಸರಿಯಿತು. ಲಂಡನ್‌ನ ಒಂಟಾರಿಯೋ ಸಿಟಿ ಕಾರ್ಪೊರೇಷನ್‌ ಇದೇ ರೀತಿಯ ಯೋಜನೆ ಹೊಂದಿದೆ. ಅಲ್ಲಿನ ನಗರಸಭೆ ಕಲಾಪಗಳನ್ನು ಮೊಬೈಲ್‌ ಆ್ಯಪ್‌ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry