‘ಬೋಗಸ್ ಮತಗಳಿಂದ ಬಿಜೆಪಿಗೆ ಜಯ’

7

‘ಬೋಗಸ್ ಮತಗಳಿಂದ ಬಿಜೆಪಿಗೆ ಜಯ’

Published:
Updated:

ಬೆಂಗಳೂರು: ‘ಯಲಹಂಕ ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್ ಬೋಗಸ್ ಮತಗಳನ್ನು ಹಾಕಿಸಿಕೊಂಡು ಗೆದ್ದಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ಹನುಮಂತೇಗೌಡ ಆರೋಪಿಸಿದರು.

ಹೆಸರಘಟ್ಟ ಗ್ರಾಮದಲ್ಲಿ ಜೆಡಿಎಸ್‌ ಆತ್ಮಾವಲೋಕನ ಮತ್ತು ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.

‘ಹೊರ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರನ್ನು ಕರೆತಂದು ಗುರುತಿನ ಚೀಟಿ ಮಾಡಿಸಿ ಮತ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಜೆಡಿಎಸ್‌ಗೆ ಬಂದ ಬಿಜೆಪಿ ಕಾರ್ಯಕರ್ತರೇ ಹೇಳಿದ್ದಾರೆ. ಮುಂದೆ ಜೆಡಿಎಸ್‌ ಅವರಿಗೆ ತಕ್ಕ ಉತ್ತರ ನೀಡಲಿದೆ’ ಎಂದರು.

ಮುಖಂಡ ಎನ್.ಕೃಷ್ಣಪ್ಪ ಮಾತನಾಡಿ, ‘ಯಲಹಂಕದಲ್ಲಿ ಜೆಡಿಎಸ್‌ ಸಂಘಟನೆಯಾಗಿ ಹೋರಾಟ ಮಾಡಿತ್ತು. ಆದರೆ ನಮ್ಮ ಪಕ್ಷಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿಗಳಿಂದ ಸೇರ್ಪಡೆ ಆದವರು ಬೇರೆ ಬೇರೆ ಗುಂಪುಗಳಾಗಿ ಕೆಲಸ ಮಾಡಿದರು. ಅವರನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಯಲಹಂಕ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ರೆಡ್ಡಿ ಮಾತನಾಡಿ, ‘ನಾವು ಸೋತರೂ ಗೆದ್ದಿದ್ದೇವೆ. ಯಾಕೆಂದರೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry