ಶಿಶುವಿನ ಮೃತದೇಹ ಪತ್ತೆ

7

ಶಿಶುವಿನ ಮೃತದೇಹ ಪತ್ತೆ

Published:
Updated:

ಬೆಂಗಳೂರು: ಬ್ಯಾಟರಾಯನಪುರದ ಆಲನಹಳ್ಳಿ ಮುಖ್ಯರಸ್ತೆಯ ಕಸದ ತೊಟ್ಟಿಯೊಂದರಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಭಾನುವಾರ ಪತ್ತೆಯಾಗಿದೆ.

ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲನಹಳ್ಳಿ ಮುಖ್ಯರಸ್ತೆಯ ಅರಳಿಮರದ ಸಮೀಪ ಕಸದತೊಟ್ಟಿಯಲ್ಲಿ ನವಜಾತ ಶಿಶು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅವರು ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

‘ಶಿಶು ಮೃತಪಟ್ಟ ಬಳಿಕ ತಂದು ಇಟ್ಟಿದ್ದಾರೋ ಅಥವಾ ಬದುಕಿದ್ದಾಗಲೇ ಇಟ್ಟು ಹೋಗಿದ್ದಾರೋ ಎಂಬ ಬಗ್ಗೆ ಮಾಹಿತಿ ಇಲ್ಲ. ಸಿ.ಸಿ.ಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry