ಜಲಮಂಡಳಿ ಹಣ ಬೆಟ್ಟಿಂಗ್‌ಗೆ

7

ಜಲಮಂಡಳಿ ಹಣ ಬೆಟ್ಟಿಂಗ್‌ಗೆ

Published:
Updated:

ಬೆಂಗಳೂರು: ಬ್ಯಾಂಕ್‌ಗೆ ಜಮೆ ಮಾಡಬೇಕಿದ್ದ ಜಲಮಂಡಳಿಯ ₹1.50 ಕೋಟಿಯನ್ನು ಐಪಿಎಲ್‌ ಬೆಟ್ಟಿಂಗ್‌ಗೆ ಬಳಕೆ ಮಾಡಿಕೊಂಡ ಆರೋಪದ ಮೇಲೆ ಸಿ.ಎಂ.ಎಸ್‌ ಇನ್ಫೊ ಸಿಸ್ಟಮ್ಸ್‌ನ ನೌಕರನೊಬ್ಬನನ್ನು ರಾಜರಾಜೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ.

ರಾಘವ ನಗರದ ಎನ್‌ಟಿಒ ಬಡಾವಣೆ ನಿವಾಸಿ ಜೈ ಶಂಕರ್‌ ಬಂಧಿತ ಆರೋಪಿ. ಹಣ ದುರ್ಬಳಕೆ ಆಗಿರುವ ಬಗ್ಗೆ ಸಿ.ಎಂ.ಎಸ್‌ ಇನ್ಫೊ ಸಿಸ್ಟಮ್ಸ್‌ನ ರಾಜರಾಜೇಶ್ವರಿ ನಗರ ಶಾಖೆಯ ವ್ಯವಸ್ಥಾಪಕ ರಂಗನಾಥ ದೂರು ನೀಡಿದ್ದರು.

‘ಜಲಮಂಡಳಿಯ ಕಿಯೋಸ್ಕ್‌ ಮಷಿನ್‌ನಿಂದ (ಡೆಪಾಸಿಟ್‌ ಮಷಿನ್‌) ಹಣ ತೆಗೆದು ಸಿಂಡಿಕೇಟ್‌ ಬ್ಯಾಂಕ್‌ಗೆ ಜಮೆ ಮಾಡುವ ಕೆಲಸವನ್ನು ಸಿ.ಎಂ.ಎಸ್‌ ಇನ್ಫೊ ಸಿಸ್ಟಮ್ಸ್‌ ಮಾಡುತ್ತಿದ್ದು, ಇದೇ 7ರಂದು ಬ್ಯಾಂಕ್‌ ವ್ಯವಸ್ಥಾಪಕರು ಕರೆ ಮಾಡಿ ಹಣ ಸಂಗ್ರಹ ಮತ್ತು ಜಮೆ ಮಾಡಿರುವುರಲ್ಲಿ ವ್ಯತ್ಯಾಸ ಆಗಿರುವುದನ್ನು ಗಮನಕ್ಕೆ ತಂದಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಸೆಪ್ಟೆಂಬರ್‌ 2017ರಿಂದ ಮಾರ್ಚ್‌2018ರ ವರೆಗೆ ರಾಜರಾಜೇಶ್ವರಿನಗರ ಮಾರ್ಗದ ಹಣ ಸಂಗ್ರಹದಲ್ಲಿ ₹ 1.50 ಕೋಟಿ ವ್ಯತ್ಯಾಸ ಬರುತ್ತಿದೆ ಎಂದು ಮಾಹಿತಿ ನೀಡಿದ್ದರು’ ಎಂದು ಹೇಳಿದ್ದಾರೆ.

’ಜಯಶಂಕರ್‌ ಮತ್ತು ಮೋಹನ್‌ ಎಂಬುವವರು ಈ ಮಾರ್ಗದಲ್ಲಿ ಹಣ ಸಂಗ್ರಹ ಮಾಡಿ ಬ್ಯಾಂಕ್‌ಗೆ ಜಮೆ ಮಾಡುವ ಕೆಲಸ ವಹಿಸಲಾಗಿತ್ತು. ಅವರೇ ಈ ಅವ್ಯವಹಾರ ನಡೆಸಿದ್ದು, ಸೂಕ್ತ  ಕಾನೂನು ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry