4

ಡೆಂಗಿ: ರಾಜ್ಯಕ್ಕೆ ಮೂರನೇ ಸ್ಥಾನ

Published:
Updated:
ಡೆಂಗಿ: ರಾಜ್ಯಕ್ಕೆ ಮೂರನೇ ಸ್ಥಾನ

ಬೆಂಗಳೂರು: ತಮಿಳುನಾಡು ಹಾಗೂ ಕೇರಳದ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಡೆಂಗಿ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ 2014ರಲ್ಲಿ 3,358 ಜನರು ಡೆಂಗಿಗೆ ತುತ್ತಾಗಿದ್ದರು. 2017ರಲ್ಲಿ 17,265 ಪ್ರಕರಣಗಳು ವರದಿಯಾಗಿದ್ದವು. 2018ರಲ್ಲಿ 1,006 ಪ್ರಕರಣಗಳು ದಾಖಲಾಗಿವೆ.

ತಮಿಳುನಾಡಿನಲ್ಲಿ 23,294 ಹಾಗೂ ಕೇರಳದಲ್ಲಿ 19,975 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಮೂರು ವರ್ಷಗಳಿಂದ ಡೆಂಗಿ ಪ್ರಕರಣ

ಗಳು ನಿಯಮಿತವಾಗಿ ಹೆಚ್ಚುತ್ತಲೇ ಇವೆ. ಈ ವರ್ಷ 1000ಕ್ಕಿಂತ ಹೆಚ್ಚು ಮಂದಿ ಡೆಂಗಿಗೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ 40 ಚಿಕೂನ್‌ ಗುನ್ಯಾ ಹಾಗೂ 368 ಡೆಂಗಿ ಪ್ರಕರಣಗಳು ಕಂಡು ಬಂದಿವೆ. ಮಳೆಯ ವಾತಾವರಣ ಇದ್ದರೆ ಸೊಳ್ಳೆಗಳು ವಾರಕ್ಕೆ 10,000ದಷ್ಟು ಸಂತಾನಾಭಿವೃದ್ಧಿ ಮಾಡುತ್ತವೆ.

‘ಕಟ್ಟಡ ನಿರ್ಮಾಣವಾಗುವ ಪ್ರದೇಶದಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಆದ್ದರಿಂದ ಇಂತಹ ಪ್ರದೇಶಗಳಲ್ಲಿ ಸ್ವಚ್ಛತೆ

ಕಾಪಾಡಿಕೊಳ್ಳಬೇಕು. 8 ಗಂಟೆಗಳ ಬಳಿಕವೂ ಜ್ವರ ಕಡಿಮೆಯಾಗದಿದ್ದರೆ ಎಚ್ಚರ ವಹಿಸಬೇಕು. ದಿನಕ್ಕೆ 3 ರಿಂದ 4 ಲೀಟರ್‌ ನೀರನ್ನು ಕುಡಿಯಬೇಕು’ ಎಂದು ನಾರಾಯಣ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

‘ಮುಂಗಾರು ಮಳೆ ಆರಂಭವಾದ ತಕ್ಷಣ ಡೆಂಗಿ ಪ್ರಕರಣಗಳು ಹೆಚ್ಚುತ್ತವೆ. ಮಳೆ ಬಂದ ತಕ್ಷಣ ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಸೊಳ್ಳೆ

ಗಳು ಉತ್ಪತ್ತಿಯಾಗುತ್ತವೆ. ಸ್ವಚ್ಛತೆಯನ್ನು ಕಾಪಾಡಿದರೆ ರೋಗಗಳನ್ನು ತಡೆಗಟ್ಟಬಹುದು’ ಎಂದು ಅಪೋಲೊ ಆಸ್ಪತ್ರೆಯ ವೈದ್ಯ ಡಾ. ಜ್ಯೋತ್ಸ್ನಾಕೃಷ್ಣಪ್ಪ ಹೇಳಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಆರೋಗ್ಯ ಕೇಂದ್ರಗಳು ಕಡಿಮೆ ಇರುವುದರಿಂದ ಪ್ರಕರಣಗಳೂ ಕಡಿಮೆ ದಾಖಲಾಗುತ್ತವೆ’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಎಚ್‌.ಎನ್‌.ಲೋಕೇಶ್ ಹೇಳಿದರು.

‘ಸೊಳ್ಳೆಗಳ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆ ಸತತ ಪ್ರಯತ್ನ ಮಾಡುತ್ತಿದೆ. ಮಳೆ ಆರಂಭವಾದ ನಂತರ ಬರುವ ಜ್ವರವನ್ನು ನಿರ್ಲಕ್ಷಿಸ ಬಾರದು’ ಎಂದು ಆರೋಗ್ಯ ಇಲಾಖೆಯ ಸಂಶೋಧನಾ ಅಧಿಕಾರಿ ಡಾ. ಶರೀಫ್ ಹೇಳಿದರು.

* ಡೆಂಗಿ ಸಾಮಾನ್ಯ ಲಕ್ಷಣಗಳು

*ಕಣ್ಣು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು

*ವಿಪರೀತ ತಲೆನೋವು

*ಚರ್ಮದ ಮೇಲೆ ಅಲರ್ಜಿ ರೀತಿಯ ಗುಳ್ಳೆಗಳು

*ಮೂಗಿನಲ್ಲಿ ರಕ್ತ ಬರುವುದು

ಸೊಳ್ಳೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

* ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು

* ಹೂವಿನ ಕುಂಡದ ಕೆಳಗೆ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು

* ಮನೆಯಲ್ಲಿ ಕತ್ತಲು ಇರುವ ಭಾಗಗಳಲ್ಲಿ ಸೊಳ್ಳೆಗಳನ್ನು ಕಡಿಮೆ ಮಾಡುವುದು

* ಸೊಳ್ಳೆ ನಿವಾರಕಗಳನ್ನು ಬಳಸಬಹುದು

* ಉದ್ದ ತೋಳು, ಉದ್ದ ಪ್ಯಾಂಟ್‌ ಇರುವ ಬಟ್ಟೆ ಧರಿಸಬೇಕು

* ಮಲಗುವಾಗ ಸೊಳ್ಳೆಪರದೆ ಬಳಸಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry