‘ಅದೃಷ್ಟದ ಬಂಗಲೆ’ಗಾಗಿ ಯಡಿಯೂರಪ್ಪ ಪತ್ರ?

7

‘ಅದೃಷ್ಟದ ಬಂಗಲೆ’ಗಾಗಿ ಯಡಿಯೂರಪ್ಪ ಪತ್ರ?

Published:
Updated:

ಬೆಂಗಳೂರು: ತಮ್ಮ ವಾಸ್ತವ್ಯಕ್ಕೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ‘ರೇಸ್‌ ವ್ಯೂ ಕಾಟೇಜ್‌’ ಹಂಚಿಕೆ ಮಾಡುವಂತೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.

ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಬಿ. ರಮಾನಾಥ ರೈ ಈ ಸರ್ಕಾರಿ ಬಂಗಲೆಯಲ್ಲಿ ಸದ್ಯ ವಾಸವಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅವರು ತಿಂಗಳಾಂತ್ಯಕ್ಕೆ ಮನೆ ಖಾಲಿ ಮಾಡಬೇಕಾಗಿದೆ.

2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಈ ಬಂಗಲೆಯಲ್ಲಿದ್ದರು. ಅಲ್ಲಿದ್ದಾಗಲೇ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಪದವಿಗೆ ಏರಿದ್ದರು. ಹಿಂದೆ ವಾಸವಿದ್ದ ಮನೆಯನ್ನು ‘ಅದೃಷ್ಟದ ಬಂಗಲೆ’ ಎಂದು ಭಾವಿಸಿರುವ ಅವರು ಅದನ್ನೇ ತಮಗೆ ಮಂಜೂರು ಮಾಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry