ಕಟ್ಟಡದಿಂದ ಜಿಗಿದು ಟೆಕಿ ಆತ್ಮಹತ್ಯೆ

7

ಕಟ್ಟಡದಿಂದ ಜಿಗಿದು ಟೆಕಿ ಆತ್ಮಹತ್ಯೆ

Published:
Updated:
ಕಟ್ಟಡದಿಂದ ಜಿಗಿದು ಟೆಕಿ ಆತ್ಮಹತ್ಯೆ

ಬೆಂಗಳೂರು: ಐಟಿಪಿಎಲ್‌ನ 12ನೇ ಮಹಡಿಯಲ್ಲಿರುವ ಸಾಫ್ಟ್‌ವೇರ್‌ ಕಂಪನಿಯ ಕಚೇರಿಯಿಂದ ಉದ್ಯೋಗಿಯೊಬ್ಬ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸೋಮವಾರ ನಡೆದಿದೆ.

ಮಧ್ಯಪ್ರದೇಶ ಮೂಲದ ಭವೇಶ್‌ ಜೈಸ್ವಾಲ್‌ (23) ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಐಟಿಪಿಎಲ್‌ನಲ್ಲಿರುವ ಎಂ.ಯು ಸಿಗ್ಮಾ ಸಾಫ್ಟವೇರ್‌ ಕಂಪನಿಯ ಉದ್ಯೋಗಿ.

ಕಚೇರಿಯ ಕಿಟಕಿಯ ಗಾಜು ಒಡೆದು ಭವೇಶ್‌ ಹಾರಿದ್ದಾನೆ. ಏನೋ ಬಿದ್ದ ಶಬ್ದ ಕೇಳಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಓಡಿ ಬಂದಿದ್ದಾರೆ. ಯುವಕನನ್ನು ನೋಡಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಆತ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ವೈಟ್‌ಫೀಲ್ಡ್‌ ಠಾಣೆಯ ಪೊಲೀಸರು ತಿಳಿಸಿದ್ದಾರೆ.

‘ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಆತ ಕೆಲಸ ಮಾಡುತ್ತಿರುವ ಕಂಪನಿಯ ಸಹೋದ್ಯೋಗಿಗಳು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ. ಈ ಘಟನೆಯಿಂದ ಐಟಿಪಿಎಲ್‌ನಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತುಉ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry