ಚಾಕು ತೋರಿಸಿ ₹15 ಸಾವಿರ ಸುಲಿಗೆ

7

ಚಾಕು ತೋರಿಸಿ ₹15 ಸಾವಿರ ಸುಲಿಗೆ

Published:
Updated:

ಬೆಂಗಳೂರು: ಚಿಕ್ಕಪೇಟೆಯ ಮೋಹನ್ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೊಬ್ಬರ ಕುತ್ತಿಗೆಗೆ ಚಾಕು ಹಿಡಿದಿದ್ದ ದುಷ್ಕರ್ಮಿಗಳಿಬ್ಬರು, ₹15 ಸಾವಿರ ಸುಲಿಗೆ ಮಾಡಿದ್ದಾರೆ.

ಘಟನೆ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ, ಆ ದೃಶ್ಯಗಳನ್ನು ಪೊಲೀಸರಿಗೆ ಕೊಟ್ಟಿದ್ದಾರೆ.

‘ತಮಿಳುನಾಡಿನಿಂದ ನಗರಕ್ಕೆ ಬಂದಿದ್ದ ವ್ಯಕ್ತಿ, ಸೋಮವಾರ ಬೆಳಿಗ್ಗೆ ಕಾಂಪ್ಲೆಕ್ಸ್‌ ಬಳಿ ಹೋಗಿದ್ದರು. ಅವರನ್ನು ಹಿಂಬಾಲಿಸಿದ್ದ ಯುವಕರಿಬ್ಬರು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ವ್ಯಕ್ತಿಯೂ ಹೊರಟು ಹೋಗಿದ್ದಾರೆ. ಅವರು ಯಾರು ಎಂದು ಗೊತ್ತಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry