‘ಕೋಮುವಾದಿ ವಿರೋಧಿ ದಿನ’ ಆಚರಣೆ 17ಕ್ಕೆ

7

‘ಕೋಮುವಾದಿ ವಿರೋಧಿ ದಿನ’ ಆಚರಣೆ 17ಕ್ಕೆ

Published:
Updated:

ಬೆಂಗಳೂರು: ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಆರೋಪಿಸಿರುವ ರಾಜ್ಯ ದಲಿತ ಸಂಘರ್ಷ ಸಮಿತಿ, ಜೂನ್‌ 17ರಂದು ಜಾತಿವಾದಿ–ಕೋಮುವಾದಿ ವಿರೋಧಿ ದಿನ ಆಚರಿಸಲು ತೀರ್ಮಾನಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಚಿಂತಕ ಜಿ.ಕೆ. ಗೋವಿಂದರಾವ್‌ ಉದ್ಘಾಟಿಸಲಿದ್ದಾರೆ. ವಿಚಾರವಾದಿಗಳಾದ ನಟರಾಜ್‌ ಹುಳಿಯಾರ್‌, ರುದ್ರಪ್ಪ ಹನಗವಾಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮಕ್ಕಳ ಹಕ್ಕುಗಳಿಗಾಗಿ ಜಾಥಾ

ಬೆಂಗಳೂರು: ‘ಮಕ್ಕಳ ಹಕ್ಕುಗಳಿಗೆ ಹೋರಾಡುವ ಉದ್ದೇಶದಿಂದ ಇದೇ 16ರಂದು ಪುರಭವನದ ಎದುರು ಜಾಥಾ ನಡೆಸಲಿದ್ದೇವೆ’ ಎಂದು ಕ್ರಿಸ್ಪ್‌ ಸಂಸ್ಥೆ ಅಧ್ಯಕ್ಷ ವಿ.ಜಹಾಗೀರದಾರ್  ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆ ಹಾಗೂ ಮಕ್ಕಳಿಗೆ ಪ್ರತ್ಯೇಕ ಇಲಾಖೆ ಇರಬೇಕು. ಮಕ್ಕಳು ಇರುವ ಪೋಷಕರ ವಿಚ್ಛೇದನ ಪ್ರಕರಣ

ಗಳನ್ನು ನ್ಯಾಯಾಲಯಗಳು ಆರು ತಿಂಗಳ ಒಳಗಾಗಿ ಬಗೆಹರಿಸಬೇಕು ಎಂಬ ಬೇಡಿಕೆಗಳೊಂದಿಗೆ ಜಾಥಾ ಮಾಡಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry