ಮಕ್ಕಳ ಕಳ್ಳರೆಂಬ ಶಂಕೆ; ಯುವತಿಯರ ವಿಚಾರಣೆ

7

ಮಕ್ಕಳ ಕಳ್ಳರೆಂಬ ಶಂಕೆ; ಯುವತಿಯರ ವಿಚಾರಣೆ

Published:
Updated:

ಬೆಂಗಳೂರು: ಮಕ್ಕಳ ಕಳ್ಳರೆಂಬ ಅನುಮಾನದ ಮೇರೆಗೆ ಮೂವರು ಯುವತಿಯರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದ್ದ ಅಶೋಕ ನಗರ ‍ಪೊಲೀಸರು, ಕೆಲ ಗಂಟೆಗಳ ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಮಾಡರ್ನ್‌ ಬಟ್ಟೆಗಳನ್ನು ತೊಟ್ಟಿದ್ದ ಆರು ಯುವತಿಯರು, ಎಂ.ಜಿ.ರಸ್ತೆಯಲ್ಲಿ ಓಡಾಡುತ್ತಿದ್ದರು. ಜನರಿಂದ ಹಣ ಸಂಗ್ರಹಿಸಿ, ರಶೀದಿ ನೀಡುತ್ತಿದ್ದರು. ಅವರನ್ನು ಕಂಡಿದ್ದ ವ್ಯಾಪಾರಿಯೊಬ್ಬರು, ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಸ್ಥಳಕ್ಕೆ ಹೋಗುತ್ತಿದ್ದಂತೆ ಮೂವರು ಓಡಿಹೋದರು. ಉಳಿದ ಮೂವರನ್ನಷ್ಟೇ ವಶಕ್ಕೆ ಪಡೆದ ಸಿಬ್ಬಂದಿ, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

‘ಯುವತಿಯರ ಜತೆ ಮಗು ಇತ್ತು. ಅವರು ಮಕ್ಕಳ ಕಳ್ಳರಿರಬಹುದು ಎಂದು ಅನುಮಾನ ಬಂದಿತ್ತು. ಹೀಗಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಮಗುವಿನ ಸಮೇತ ಮೂವರು ಪರಾರಿಯಾದರು’ ಎಂದು ಸ್ಥಳೀಯರೊಬ್ಬರು ಹೇಳಿದರು.

ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ, ‘ಯುವತಿಯರು ಮಕ್ಕಳ ಕಳ್ಳರಲ್ಲ. ರಾಜಸ್ಥಾನದಿಂದ ಬಂದು ಚಿಕ್ಕಪೇಟೆಯಲ್ಲಿ ಉಳಿದುಕೊಂಡಿದ್ದಾರೆ. ಅವರ ಹಿನ್ನೆಲೆ ಹಾಗೂ ಪೋಷಕರ ಬಗ್ಗೆ ತಿಳಿದುಕೊಂಡ ಬಳಿಕವೇ ಬಿಟ್ಟು ಕಳುಹಿಸಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry