ನಾಲ್ವರ ಸಾವು

7

ನಾಲ್ವರ ಸಾವು

Published:
Updated:

ಬೆಂಗಳೂರು: ನಗರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ರೈಲಿಗೆ ಸಿಲುಕಿ ಮೂವರು ಹಾಗೂ ರೈಲಿನಿಂದ ಜಿಗಿದು ಒಬ್ಬ ಮೃತಪಟ್ಟಿದ್ದಾರೆ.

ಕೆಂಗೇರಿ–ಹೆಜ್ಜಾಲ ರೈಲು ನಿಲ್ದಾಣಗಳ ನಡುವಿನ ನೈಸ್ ರಸ್ತೆ ಸೇತುವೆ ಬಳಿ ರೈಲಿನಿಂದ ಜಿಗಿದು ಚನ್ನಪಟ್ಟಣದ ಆಟೊ ಚಾಲಕ ಕೋದಂಡ (30) ಎಂಬುವರು ಮೃತಪಟ್ಟಿದ್ದಾರೆ.ಚನ್ನಪಟ್ಟಣ– ಶೆಟ್ಟಿಹಳ್ಳಿ ರೈಲು ನಿಲ್ದಾಣದ ನಡುವಿನ ಮಾರ್ಗದಲ್ಲಿ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಚಿಕ್ಕಬಾಣಾವರ ರೈಲ್ವೆ ನಿಲ್ದಾಣ ಸಮೀ‍‍ಪ ರೈಲಿಗೆ ಸಿಲುಕಿ ದಾವಣಗೆರೆಯ ಸುನೀಲ್ (31) ಎಂಬುವರು ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವೈಟ್‌ಫೀಲ್ಡ್‌ –ಹೂಡಿ ರೈಲ್ವೆ ನಿಲ್ದಾಣದ ಮಧ್ಯೆ ಹಳಿ ದಾಟುತ್ತಿದ್ದ ವೇಳೆ ರೈಲು ಗುದ್ದಿ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry