ಬಂಕ್‌ಗೆ ನುಗ್ಗಿದ ಬಸ್‌

7

ಬಂಕ್‌ಗೆ ನುಗ್ಗಿದ ಬಸ್‌

Published:
Updated:

ಬೆಂಗಳೂರು: ಚಿಕ್ಕಮಗಳೂರಿನಿಂದ ನಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಗೊರಗುಂಟೆಪಾಳ್ಯದ ಎಚ್‌.ಪಿ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಘಟನೆ ವೇಳೆ ಬಸ್ಸಿನಲ್ಲಿ 9 ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಚಾಲಕ ಪುಟ್ಟರಾಜು ಚಲಾಯಿಸುತ್ತಿದ್ದ ಬಸ್‌ (ಕೆಎ 13 ಎಫ್‌ 2162), ಗೊರಗುಂಟೆಪಾಳ್ಯದ ಸಿಗ್ನಲ್ ದಾಟುತ್ತಿದ್ದಂತೆ ಬ್ರೇಕ್‌ ಫೇಲ್‌ ಆಗಿದ್ದರಿಂದ ನಿಯಂತ್ರಣ ತಪ್ಪಿತು. ಬಂಕ್‌ಗೆ ನುಗ್ಗಿದ ಬಸ್‌, ಗೋಡೆಗೆ ಗುದ್ದಿತು. ಬಂಕ್ ಸಿಬ್ಬಂದಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry