ಬೀಗ ಹಾಕಿದ್ದನ್ನು ಗಮನಿಸಿ ಕಳ್ಳತನ

7
ಫೇಸ್‌ಬುಕ್‌ ಪೋಸ್ಟ್‌ ವದಂತಿ ಎಂದ ಪೊಲೀಸರು

ಬೀಗ ಹಾಕಿದ್ದನ್ನು ಗಮನಿಸಿ ಕಳ್ಳತನ

Published:
Updated:

ಬೆಂಗಳೂರು: ಆರ್‌.ಟಿ.ನಗರದ ಲೋಹಿತ್‌ ಎಂಬುವರ ಮನೆ ಬೀಗ ಹಾಕಿದ್ದನ್ನು ಗಮನಿಸಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಫೇಸ್‌ಬುಕ್‌ ಪೋಸ್ಟ್‌ ನೋಡಿ ಕೃತ್ಯ ಎಸಗಿದ್ದಾರೆ ಎನ್ನುವುದು ವದಂತಿಯಷ್ಟೇ ಎಂದು ಪೊಲೀಸರು ಹೇಳಿದ್ದಾರೆ.

ನಾರಾಯಣಪ್ಪ ಬ್ಲಾಕ್‌ನಲ್ಲಿ ವಾಸವಿರುವ ಲೋಹಿತ್, ಜೂನ್‌ 8ರಂದು ಕುಟುಂಬ ಸಮೇತ ತಮಿಳುನಾಡಿನ ಗೋಪಿಚೆಟ್ಟಿ ಪಾಳ್ಯಂಗೆ ಹೋಗಿದ್ದರು. ಜೂನ್ 11ರಂದು ವಾಪಸ್‌ ಮನೆಗೆ ಬಂದಾಗ ಕಳ್ಳತನವಾಗಿದ್ದು ಗೊತ್ತಾಗಿದೆ.

ಮನೆಯ ಕಿಟಕಿ ಮುರಿದು ಒಳನುಗ್ಗಿರುವ ಕಳ್ಳರು, 400 ಗ್ರಾಂ ಚಿನ್ನಾಭರಣ ಹಾಗೂ ₹ 45 ಸಾವಿರ ನಗದು ಕದ್ದೊಯ್ದಿದ್ದಾರೆ. ಜತೆಗೆ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನೂ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ತಮ್ಮೂರಿನಲ್ಲಿದ್ದಾಗ ಒಂದು ಫೋಟೊ ಕ್ಲಿಕ್ಕಿಸಿಕೊಂಡಿದ್ದ ಲೋಹಿತ್‌ ಸಹೋದರಿ ಪ್ರೇಮಲತಾ , ‘ಆನ್‌ ದಿ ವೇ ಟು ಮೈ ನೇಟಿವ್‌ ಪ್ಲೇಸ್‌ ಗೋ‍ಪಿಚೆಟ್ಟಿ ಪಾಳ್ಯಂ’ ಅಂತ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಅದನ್ನು ನೋಡಿಯೇ ಕಳ್ಳರು ಕೃತ್ಯ ಎಸಗಿದ್ದಾರೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆ ಪೋಸ್ಟ್‌ ಸಹ ಪ್ರೇಮಲತಾ ಬಳಿ ಇಲ್ಲ. ಸ್ಕ್ರೀನ್‌ ಶಾಟ್‌ ಮಾತ್ರ ತೋರಿಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry