ರಾಘವೇಂದ್ರ ರಾಜ್‌ಕುಮಾರ್ ಉರುಳು ಸೇವೆ

7

ರಾಘವೇಂದ್ರ ರಾಜ್‌ಕುಮಾರ್ ಉರುಳು ಸೇವೆ

Published:
Updated:
ರಾಘವೇಂದ್ರ ರಾಜ್‌ಕುಮಾರ್ ಉರುಳು ಸೇವೆ

ರಾಯಚೂರು: ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬುಧವಾರ ಉರುಳು ಸೇವೆ ಮಾಡಿ ಹರಕೆ ತೀರಿಸಿದರು.

ಅವರ ಪತ್ನಿ, ಪುತ್ರ ವಿನಯ್ ರಾಜ್‌ಕುಮಾರ್, ಸೋದರತ್ತೆ ಜತೆಯಲ್ಲಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ತಂದೆಯವರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದರು. ರಾಯರ ಅನುಗ್ರಹವಿಲ್ಲದೆ ನಾವು ಯಾವ ಕೆಲಸವನ್ನೂ ಮಾಡಿಲ್ಲ. ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ ಅನಾರೋಗ್ಯದಿಂದ ನಡೆಯಲೂ ಆಗದಷ್ಟು ಅಶಕ್ತನಾಗಿದ್ದೆ. ಈ ಬಾರಿ ಉರುಳು ಸೇವೆ ಮಾಡುವಷ್ಟು ಶಕ್ತಿಯನ್ನು ರಾಯರು ಕರುಣಿಸಿದ್ದಾರೆ. ಮುಂದಿನ ಬಾರಿ ಮಠದ ಪ್ರಾಂಗಣದಲ್ಲಿ ಓಡಾಡುವಷ್ಟು ಶಕ್ತಿ ಬರಲಿದೆ ಎನ್ನುವ ವಿಶ್ವಾಸವಿದೆ’ ಎಂದರು.

ಪುತ್ರ ವಿನಯ್ ರಾಜ್‌ಕುಮಾರ್ ನಟಿಸಿರುವ ‘ಅನಂತು ವರ್ಸಸ್ ಮುಜರತ್’ ಸಿನಿಮಾ ಚಿತ್ರೀಕರಣ ಮುಗಿದಿದೆ. ‘ಗ್ರಾಮಾಯಣ’ ಎನ್ನುವ ಹೊಸ ಸಿನಿಮಾ ಆಗಸ್ಟ್‌ನಲ್ಲಿ ಸೆಟ್ಟೆರುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry